Download Our App

Follow us

Home » ಅಪರಾಧ » ಬಳ್ಳಾರಿ ಜೈಲಿಗೆ ದರ್ಶನ್‌ ಶಿಫ್ಟ್‌ – ರೂಟ್​ ಚೇಂಜ್​​​​ ಮಾಡಿ ಕರೆದೊಯ್ಯುತ್ತಿರುವ ಪೊಲೀಸರು..!

ಬಳ್ಳಾರಿ ಜೈಲಿಗೆ ದರ್ಶನ್‌ ಶಿಫ್ಟ್‌ – ರೂಟ್​ ಚೇಂಜ್​​​​ ಮಾಡಿ ಕರೆದೊಯ್ಯುತ್ತಿರುವ ಪೊಲೀಸರು..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​ನ್ನು ಪೊಲೀಸರು ಹೈ ಸೆಕ್ಯೂರಿಟಿಯಲ್ಲಿ ಬಳ್ಳಾರಿ ಜೈಲಿನತ್ತ ಕರೆದೊಯ್ಯುತ್ತಿದ್ದಾರೆ. ಜೈಲಿನ ಸುತ್ತ ದರ್ಶನ್​ ಅಭಿಮಾನಿಗಳು ಸೇರುವ ಹಿನ್ನಲೆ ಬಳ್ಳಾರಿ ಕಾರಾಗೃಹ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್​​ ಮಾಡಲಾಗಿದೆ. ಆರೋಪಿ ದರ್ಶನ್​​ನ್ನು ಪೊಲೀಸರು ರೂಟ್​ ಚೇಂಜ್​​​​ ಮಾಡಿ ಬಳ್ಳಾರಿಗೆ ಕರೆದೊಯ್ಯುತ್ತಿದ್ದಾರೆ.

ನಿನ್ನೆ ಶಿರಾ ಮಾರ್ಗವಾಗಿ ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ಕರೆದುಕೊಂಡು ಹೋಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು ಆದರೆ ಇಂದು ಚಿಕ್ಕಬಳ್ಳಾಪುರ, ಬಾಗೆಪಲ್ಲಿ, ಅನಂತಪುರ ಮಾರ್ಗವಾಗಿ ಬಳ್ಳಾರಿಗೆ ಕರೆ ತರಲಾಗುತ್ತಿದೆ. ಆಂಧ್ರ ಗಡಿ ಮೂಲಕ ದರ್ಶನ್​ ಬಳ್ಳಾರಿ ತಲುಪಲಿದ್ದಾರೆ.

ಎಸಿಪಿ ಭರತ್ ರೆಡ್ಡಿ ನೇತೃತ್ವದಲ್ಲಿ ಮೂರು ಪೊಲೀಸ್ ವಾಹನಗಳ ಭದ್ರತೆಯಲ್ಲಿ ದರ್ಶನ್ ತೆರಳುತ್ತಿದ್ದಾರೆ. ಪರಪ್ಪನ ಅಗ್ರಹಾರದಿಂದ ಹೊರಟ ವಾಹನ ಮೇಕ್ರಿ ವೃತ್ತ, ಹೆಬ್ಬಾಳ ರಸ್ತೆ, ಯಲಹಂಕ, ಚಿಕ್ಕಬಳ್ಳಾಪುರ ಮಾರ್ಗವಾಗಿ ಬಳ್ಳಾರಿಯತ್ತ ದರ್ಶನ್ ಅವರನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ಯುತ್ತಿದ್ದಾರೆ. ಬೆಳಗ್ಗೆ 6:40ಕ್ಕೆ ಬಾಗೇಪಲ್ಲಿ ತಾಲ್ಲೂಕಿನ ನಾರೇಪಲ್ಲಿ ಟೋಲ್ ಮೂಲಕ ಆಂಧ್ರಪ್ರದೇಶಕ್ಕೆ ದರ್ಶನ್‌ ಇದ್ದ ವಾಹನ ಎಂಟ್ರಿಯಾಗಿದೆ. ದರ್ಶನ್‌ ಇದ್ದ ವಾಹನದ ಕಿಟಕಿಗೆ ಪರದೆ ಹಾಕಲಾಗಿದೆ.

ಇದನ್ನೂ ಓದಿ : ಛಿದ್ರ ಛಿದ್ರವಾಗಿ ಹೋಯ್ತು ‘ಡಿ ಗ್ಯಾಂಗ್’ ​​​​​​- ಒಬ್ಬೊಬ್ಬ ಆರೋಪಿಯೂ ಒಂದೊಂದು ಜೈಲಿಗೆ ಶಿಫ್ಟ್..!

Leave a Comment

DG Ad

RELATED LATEST NEWS

Top Headlines

ಬೆಳ್ಳಂಬೆಳಗ್ಗೆ ನೇಪಾಳದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಬಿಹಾರ, ದೆಹಲಿ, ಪಂಜಾಬ್​ನಲ್ಲೂ ನಡುಗಿದ ಭೂಮಿ..!

ದೆಹಲಿ : ಇಂದು ಮುಂಜಾನೆ ನೇಪಾಳದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.1ರಷ್ಟು ದಾಖಲಾಗಿದೆ. ಭಾರತದ ಹಲವು ರಾಜ್ಯಗಳಲ್ಲೂ ಭೂಕಂಪನದ ಅನುಭವವಾಗಿದ್ದು, ಬಿಹಾರ,

Live Cricket

Add Your Heading Text Here