Download Our App

Follow us

Home » ರಾಜಕೀಯ » ಜೈಲಿನಲ್ಲಿ ದರ್ಶನ್​​​ಗೆ ರಾಜಾತಿಥ್ಯ – ರಾಜ್ಯದಲ್ಲಿ ಕಾಂಗ್ರೆಸ್​​ ಸರ್ಕಾರ ಸತ್ತು ಹೋಗಿದೆ ಎಂದ ಹೆಚ್​​ಡಿಕೆ..!

ಜೈಲಿನಲ್ಲಿ ದರ್ಶನ್​​​ಗೆ ರಾಜಾತಿಥ್ಯ – ರಾಜ್ಯದಲ್ಲಿ ಕಾಂಗ್ರೆಸ್​​ ಸರ್ಕಾರ ಸತ್ತು ಹೋಗಿದೆ ಎಂದ ಹೆಚ್​​ಡಿಕೆ..!

ಮಂಡ್ಯ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನಗೆ ರಾಜಾತಿಥ್ಯ ನೀಡಲಾಗುತ್ತಿರುವ ಫೋಟೋ ಬಹಿರಂಗವಾಗಿರುವುದು ರಾಜ್ಯ ಸರ್ಕಾರ ಮುಜುಗರ ಪಡುವಂತಾಗಿದೆ.

ಈ ವಿಚಾರವಾಗಿ ಮಂಡ್ಯದಲ್ಲಿ ಮಾತಾನಾಡಿದ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್​​ ಸರ್ಕಾರ ಸತ್ತು ಹೋಗಿದೆ. ರಾಜ್ಯದಲ್ಲಿ ಆಡಳಿತ ಎನ್ನುವ ನಡವಳಿಕೆ‌ ಇಲ್ಲ. ಭ್ರಷ್ಟಾಚಾರದ ಬಗ್ಗೆ ಬೀದಿ ಬೀದಿಯಲ್ಲಿ ಮಾತಾಡಿಕೊಂಡು ಇರುವ ಕೆಲಸ ಮಾಡ್ತಾ ಇದ್ದಾರೆ ಎಂದು ಗುಡುಗಿದ್ದಾರೆ.

ಜೈಲಿನಲ್ಲಿ ದುಡ್ಡು ಇದ್ದವರು ಏನ್​ ಬೇಕಾದ್ರೂ ಮಾಡಬಹುದು, 5 ಸ್ಟಾರ್​ ಹೊಟೇಲ್​ನಂತೆ ಜೈಲಿನಲ್ಲಿ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ದುಡ್ಡು ಕೊಟ್ಟರೆ ಏನು ಬೇಕಾದರೂ ಕೊಂಡುಕೊಳ್ಳಬಹುದು ಎಂಬುದು ಈಗ ದರ್ಶನ್ ವಿಚಾರದಲ್ಲಿ ಅದು ಪ್ರಚಾರಕ್ಕೆ ಬಂದಿದೆ. ಜೈಲಿನಲ್ಲಿನ ಅವ್ಯವಸ್ಥೆ ಹೊಸದಾಗಿ ಆಗಿಲ್ಲ, ಹಿಂದಿನಿಂದಲೂ ನಡೆಯುತ್ತಾ ಇದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಬರಲು ಸಾಧ್ಯ ಇಲ್ಲ. ಪರಮೇಶ್ವರ್​​​​​ ಪ್ರತಿದಿನ ಒಂದೊಂದು ಕಥೆ ಹೇಳ್ತಾರೆ, ನಮ್ಮದು ಹೈಟೆಕ್​ ಸರ್ಕಾರ ಅಂತಾರೆ.. ಜೈಲಿನಲ್ಲೂ ಹೈಟೆಕ್​​​​ ವ್ಯವಸ್ಥೆ ಕೊಟ್ಟಿದ್ದಾರೆ ಎಂದು ಹೆಚ್​.ಡಿ.ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ.

ಇದನ್ನೂ ಓದಿ : ದರ್ಶನ್​​ನ ತಕ್ಷಣ ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಆದೇಶಿಸಿದ ಸಿಎಂ ಸಿದ್ದರಾಮಯ್ಯ..!

Leave a Comment

DG Ad

RELATED LATEST NEWS

Top Headlines

‘ಲಕ್ಷ್ಮೀಪುತ್ರ’ನಾದ ಸ್ಯಾಂಡಲ್​ವುಡ್ ಉಪಾಧ್ಯಕ್ಷ ಚಿಕ್ಕಣ್ಣ – ಸಾಥ್ ಕೊಟ್ಟ ಎ.ಪಿ ಅರ್ಜುನ್..!

ಕಿಸ್, ಅದ್ಧೂರಿ ಲವರ್ಸ್​ನಂತಹ ಸದಭಿರುಚಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟ ಎಪಿ ಅರ್ಜುನ್ ಫಿಲ್ಮಂಸ್​​ನ ಮೂರನೇ ಸಿನಿಮಾ ಅನೌನ್ಸ್ ಆಗಿದೆ. ಎಪಿ ಅರ್ಜುನ್ ಒಡೆತನದ ಎಪಿ

Live Cricket

Add Your Heading Text Here