ಬೆಂಗಳೂರು : ಬೆಂಗಳೂರಿನಲ್ಲಿ ಮಲತಂದೆಯಿಂದ ಹೆಣ್ಮಕ್ಕಳ ಹತ್ಯೆ ಕೇಸ್ಗೆ ಸಂಬಂಧಿಸಿ ಕೊಲೆ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸುಮಿತ್ ಬಂಧಿತ ಆರೋಪಿಯಾಗಿದ್ದಾನೆ.
ಕೊಲೆ ಆರೋಪಿ ಸುಮಿತ್, ಶನಿವಾರ ಮಕ್ಕಳನ್ನು ಸ್ಕೂಲ್ಗೆ ಡ್ರಾಪ್ ಮಾಡಿ ಪಿಕ್ಅಪ್ ಮಾಡಿಕೊಂಡು ಬಂದಿದ್ದನು. ಶನಿವಾರ ಆಗಿರೋದ್ರಿಂದ ಮಕ್ಕಳು 12.30ಕ್ಕೆ ತುಂಬಾ ಖುಷಿಯಿಂದ ಮನೆಗೆ ಬಂದಿರೋದು ಸಿಸಿಟಿವಿಯಲ್ಲಿ ಸರೆಯಾಗಿದೆ. ಇನ್ನು ಮಕ್ಕಳ ಮೇಲೆ ಅನುಮಾನ ಪಟ್ಟ ಮಲತಂದೆ ಸುಮಿತ್, ಮಧ್ಯಾಹ್ನ 3 ಗಂಟೆಗೆ ಮನೆಗೆ ವಾಪಸ್ ಬಂದಿದ್ದಾನೆ. ಈ ವೇಳೆ ರೂಂನಲ್ಲಿದ್ದ ಮಗಳು ಯಾರದ್ದೋ ಜೊತೆ ಮಾತನಾಡತಿದ್ಲೂ. ಇದನ್ನು ಕಂಡ ಸುಮಿತ್ ಯಾರ ಜೊತೆ ಮಾತಾಡ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾನೆ.
ಆಗ ಮಗಳು ಮೊಬೈಲ್ನ್ನ ದಿಂಬಿನ ಕೆಳಗೆ ಮುಚ್ಚಿಟ್ಟಿದ್ದಾಳೆ. ರೂಂ ಪೂರ್ತಿ ಹುಡುಕಿದಾಗ ದಿಂಬಿನ ಕೆಳಗೆ ಮೊಬೈಲ್ ಸಿಕ್ಕಿತ್ತು. ಇದ್ದರಿಂದ ಸಿಟ್ಟಿಗೆದ್ದ ಸುಮಿತ್, ಮಚ್ಚಿನಿಂದ ಮಗಳನ್ನ ಕೊಲೆ ಮಾಡಿದ್ದಾನೆ. ಇದೇ ವೇಳೆ ವಾಶ್ ರೂಂನಿಂದ ಚಿಕ್ಕ ಮಗಳು ಬಂದಿದ್ದಾಳೆ. ಆಗ ಸುಮಿತ್ ನನಗೆ ಊಟ ಹಾಕಿಕೊಂಡು ಬರೋದಕ್ಕೆ ಹೇಳಿ, ಆನಂತರ ಇನ್ನೋರ್ವ ಮಗಳನ್ನ ಕೂಡ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ನಂತರ ಆರೋಪಿ ಬಟ್ಟೆ ಬದಲಿಸಿ ಎಸ್ಕೇಪ್ ಆಗಿದ್ದಾನೆ. ಇನ್ನು ಕೆಲಸ ಮುಗಿಸಿಕೊಂಡು ಮನೆಗೆ ಬಂದ ಅನಿತಾ ಬಾಗಿಲು ತೆರೆದು ನೋಡಿದಾಗ ಹಾಲ್ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಕ್ಕಳ ಮೃತದೇಹ ಕಂಡು ಬೆಚ್ಚಿಬಿದ್ದಿದ್ದಾರೆ. ಈ ಘಟನೆ ಸಂಬಂಧ ಮೃತ ಹೆಣ್ಣುಮಕ್ಕಳ ತಾಯಿ ಅನಿತಾ ದೂರು ನೀಡಿದ್ದಾರೆ.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀರು ಇದೀಗ ಬೆಂಗಳೂರಿನಲ್ಲೇ ಆರೋಪಿಯನ್ನ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ : ಇಂದು ಬೆಳಗಾವಿಗೆ ಸಿಎಂ ಸಿದ್ದರಾಮಯ್ಯ – ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಲೋಕಾರ್ಪಣೆ..!