ಬೆಂಗಳೂರು : ಬೆಂಗಳೂರಿನ ಡಿಸಿ ಹೆಸರಲ್ಲೇ ವಂಚನೆ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಿವೃತ್ತ ಬ್ಯಾಂಕ್ ಉದ್ಯೋಗಿಯೋರ್ವರಿಗೆ ಜಮೀನು ಮಂಜೂರಾತಿ ಮಾಡಿಸಿಕೊಡುಸ್ತೀನಿ ಅಂತಾ ಹೇಳಿ ಬೆಂಗಳೂರು ಡಿಸಿ ದಯಾನಂದ್ ಹೆಸರಿನಲ್ಲಿ 1.70 ಲಕ್ಷ ರೂ ವಂಚಿಸಿದ ಘಟನೆ ನಡೆದಿದೆ.
ಮಹೇಶ್ ಎಂದು ಹೆಸರೇಳಿಕೊಂಡು ಡಿಸಿ ಹೆಸ್ರಲ್ಲಿ ನಿವೃತ್ತ ಉದ್ಯೋಗಿಯಿಂದ 1.75 ಲಕ್ಷ ರೂ. ಪೀಕಿಸಿದ್ದಾನೆ. ಖತರ್ನಾಕ್ ಮಹೇಶ್ ಡಿಸಿ ಜತೆ ಪರಿಚಯದವನಂತೆ ಚೇಂಬರ್ನಿಂದ ಹೊರಬಂದಿದ್ದನು. ಇದನ್ನು ನಂಬಿ ವಿಶ್ವನಾಥ್ ವಿಶ್ವಾಸ ಬೆಳೆಸಿಕೊಂಡಿದ್ದರು.
ಬಳಿಕ ಖದೀಮ ಡಿಸಿ ಅವರಿಂದ ಕೆಲಸ ಮಾಡಿಸಿಕೊಡುವುದಾಗಿ ನಂಬಿಸಿದ್ದಾನೆ. ಜಮೀನು ಮಂಜೂರಾತಿಗೆ 1.30 ಲಕ್ಷ ಹಣ ಕೇಳ್ತಿದಾರೆ, ಎಕ್ಸ್ ಟ್ರಾ ಖರ್ಚು ಸೇರಿ 2 ಲಕ್ಷವಾಗುತ್ತೆ ಎಂದು ನಿವೃತ್ತ ಬ್ಯಾಂಕ್ ಉದ್ಯೋಗಿಯಿಂದ ಹಣ ಪಡೆದು ಫೋನ್ ಸ್ವಿಚಾಫ್ ಮಾಡಿಕೊಂಡಿದ್ದಾನೆ.
ತಕ್ಷಣ ವಂಚನೆಗೊಳಗಾದವರು ಕಂಪ್ಲೆಂಟ್ ಕೊಟ್ಟಿದ್ದಾರೆ. ಇನ್ನು ತನ್ನ ಹೆಸ್ರಲ್ಲೇ ವಂಚಿಸಿದ ಖತರ್ನಾಕ್ ಕಥೆ ಕೇಳಿ ಒಂದ್ ಕ್ಷಣ ಶಾಕ್ ಆದ ಡಿಸಿ, ಹಲಸೂರು ಗೇಟ್ ಪೊಲೀಸರಿಗೆ ದೂರು ನೀಡಿದ್ದಾರೆ. ವಿಶ್ವನಾಥ್ ದೂರಿನ ಮೇಲೆ ಪೊಲೀಸರು ಮಹೇಶ್ ಅರೆಸ್ಟ್ ಮಾಡಿದ್ದಾರೆ. ಈಗಾಗಲೇ ಪೊಲೀಸರು 80 ಸಾವಿರ ಹಣ ವಾಪಸ್ ಕೊಡಿಸಿದ್ದು, ಬಾಕಿ ಹಣಕ್ಕೆ ಖತರ್ನಾಕ್ ಮಹೇಶ್ ಪರದಾಡಿಸುತ್ತಿದ್ದಾನೆ.
ಇದೀಗ ಈ ವಿಚಾರವನ್ನು ತಿಳಿದು ಮಾಹಿತಿ ನೀಡಿರುವ ಬೆಂಗಳೂರು ಡಿಸಿ ದಯಾನಂದ್ ಅವರು, ತನ್ನ ಹೆಸರೇಳಿಕೊಂಡು ಯಾರೇ ಬಂದ್ರೂ ನಂಬಬೇಡಿ. ನೇರವಾಗಿ ನನ್ನ ಬಳಿಯೇ ಬನ್ನಿ..ನಿಮ್ಮ ಸೇವೆಗೆ ನಾನಿರುತ್ತೇನೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಕೋಲಾರದಲ್ಲಿ ಕೌಟುಂಬಿಕ ಕಲಹಕ್ಕೆ ಮನನೊಂದು ದಂಪತಿ ಸೂ*ಸೈಡ್..!