ಆಂಧ್ರಪ್ರದೇಶ : ಕಲ್ಯಾಣದುರ್ಗ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಪೆಟ್ರೋಲ್ ಸೋರಿಕೆ ಬಳಿಕ ವ್ಯಕ್ತಿ ಬೆಂಕಿಕಡ್ಡಿ ಎಸೆದಿರೋದರಿಂದ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಹೋಗುವಾಗ ಪೆಟ್ರೋಲ್ ರಸ್ತೆಗೆ ಚೆಲ್ಲಿತ್ತು. ಅಪಾಯದ ಅರಿವಿಲ್ಲದೆ ವ್ಯಕ್ತಿಯೋರ್ವ ಬೀಡಿ ಹಚ್ಚಿ ಬೆಂಕಿಕಡ್ಡಿಯನ್ನು ಪೆಟ್ರೋಲ್ ಮೇಲೆ ಎಸೆದಿದ್ದಾನೆ. ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ.
ಈ ವೇಳೆ ಬೈಕ್ ಸವಾರ ತನ್ನ ಬೈಕ್ ಅನ್ನು ದೂರ ತೆಗೆದುಕೊಂಡು ಹೋಗುವ ಪ್ರಯತ್ನ ಕೂಡ ಮಾಡಿದ್ದಾನೆ. ಅದೇ ಹೊತ್ತಿನಲ್ಲಿ ಸಿಗರೇಟ್ ಸೇದುತ್ತಿದ್ದ ವ್ಯಕ್ತಿಗಳೂ ಕೂಡ ಅಲ್ಲಿಂದ ಕಾಲ್ಕಿತ್ತಿದ್ದು, ಬೆಂಕಿ ಮೊದಲು ಪಕ್ಕದಲ್ಲಿದ್ದ ದ್ವಿಚಕ್ರವಾಹನಕ್ಕೆ ವ್ಯಾಪಿಸಿದಾಗ ವ್ಯಕ್ತಿಯೊಬ್ಬರು ಅದನ್ನು ಪಕ್ಕಕ್ಕೆ ಸರಿಸಿ ಬೆಂಕಿ ನಂದಿಸಿದ್ದಾರೆ.
ಭಾರೀ ಬೆಂಕಿ ಕ್ಷಣಮಾತ್ರದಲ್ಲಿ ರಸ್ತೆಯ ಅಕ್ಕಪಕ್ಕದ ಅಂಗಡಿಗಳು ಮತ್ತು ದ್ವಿಚಕ್ರ ವಾಹನಗಳಿಗೆ ವ್ಯಾಪಿಸಿ ಅವು ಬೆಂಕಿಗೆ ಆಹುತಿಯಾಗಿವೆ. ಕೂಡಲೇ ಎಚ್ಚೆತ್ತ ಅಂಗಡಿ ಮಾಲೀಕರು ಹಾಗೂ ಸ್ಥಳೀಯರು ಬೆಂಕಿ ಮೇಲೆ ನೀರು ಹಾಕಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಆ ಮೂಲಕ ಆಗಬಹುದಾಗಿದ್ದ ದೊಡ್ಡ ಅಪಾಯವೊಂದು ತಪ್ಪಿದೆ. ಬೆಂಕಿ ನಿಯಂತ್ರಣಕ್ಕೆ ಬರುತ್ತಿದ್ದಂತೆ ಅಂಗಡಿ ಮಾಲೀಕರು ಹಾಗೂ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಭೀಕರ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ : ಸ್ಕಾಟ್ಲೆಂಡ್ ಪೊಲೀಸ್ ಸ್ಟೈಲ್ನಲ್ಲಿ ದರ್ಶನ್ ಕೇಸ್ ತನಿಖೆ – 4000 ಪುಟಗಳ ಚಾರ್ಜ್ಶೀಟ್ ರೆಡಿ ಮಾಡಿದ ಪೊಲೀಸರು..!