ಚಿಕ್ಕಬಳ್ಳಾಪುರ : ಗೌರಿಬಿದನೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಕಲಿ ಬಂಗಾರ ಮಾರಾಟ ಮಾಡ್ತಿದ್ದ ವಂಚಕರ ಹೆಡೆಮುರಿ ಕಟ್ಟಿದ್ದಾರೆ. ಗಿರೀಶ್, ರವಿಕುಮಾರ್, ರಾಮಾಪುರ ಬ್ರಹ್ಮಯ್ಯ, ಅಹ್ಮದ್ ಹುಸೆನ್, ನಂದೀಶ್ ನಾಯಕ್, ಇಲಿಯೆಷ್ ಹಾಗೂ ಮಹೇಂದ್ರ ನಾಯಕ್ ಬಂಧಿತ ಆರೋಪಿಗಳು.
7 ಜನ ಆರೋಪಿಗಳು ಗೌರಿಬಿದನೂರಿನಲ್ಲಿ ಅಸಲಿ ಬಂಗಾರದ ನೆಪದಲ್ಲಿ ನಕಲಿ ಬಂಗಾರ ಮಾರಟ ಮಾಡಿ ಜನರಿಗೆ 24 ಲಕ್ಷ ರೂಪಾಯಿ ವಂಚಿಸಿದ್ದಾರೆ. ಇನ್ನು ಗೌರಿಬಿದನೂರು ಸರ್ಕಲ್ ಇನ್ಸ್ಪೆಕ್ಟರ್ ಕೆ.ಪಿ.ಸತ್ಯನಾರಾಯಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜನರಿಗೆ ಪಂಗನಾಮ ಹಾಕಿದೆ ಗ್ಯಾಂಗ್ ಅನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 23 ಲಕ್ಷ ರೂಪಾಯಿ ನಗದು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ : ಉಡುಪಿ : ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ವಿದ್ಯಾರ್ಥಿ ದಾರುಣ ಸಾವು..!
Post Views: 541