ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರು ಕಾನೂನು ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಿಸಿ ಎಂದು ಲೋಕಾಯುಕ್ತಕ್ಕೆ ಮನವಿ ಮಾಡಿದ್ದಾರೆ.
ನಿಯಮ ಉಲ್ಲಂಘಿಸಿ ಸಿಎಂ ಪತ್ನಿಗೆ ಮೂಡಾದಲ್ಲಿ 14 ಸೈಟ್ ನೀಡಲಾಗಿದೆ, ಬಿ.ಎಂ.ಪಾರ್ವತಿ ಹೆಸರಿಗೆ 14 ಬದಲಿ ನಿವೇಶನಗಳನ್ನು ನೀಡಲಾಗಿದೆ. ನಿಯಮ ಗಾಳಿಗೆ ತೂರಿ 60 ಕೋಟಿಗೂ ಹೆಚ್ಚು ಮೌಲ್ಯದ ಸರ್ಕಾರಿ ಸ್ವತ್ತು ನೀಡಲಾಗಿದೆ, ಸರ್ಕಾರಿ ಸ್ವತ್ತು ಕಬಳಿಸಿರುವ ಕುರಿತು 408 ಪುಟಗಳ ದಾಖಲೆ ಸಹಿತ ದೂರು ನೀಡಲಾಗಿತ್ತು. ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಕೂಡ್ಲೇ FIR ದಾಖಲಿಸಿ ಎಂದು ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿದ್ದಾರೆ.
ಪ್ರಮುಖ ಆರೋಪಿಗಳಾಗಿರುವ ಸಿಎಂ ಸಿದ್ದರಾಮಯ್ಯ, ಸಿಎಂ ಪತ್ನಿ ಪಾರ್ವತಿ, B. M. ಮಲ್ಲಿಕಾರ್ಜುನ ಸ್ವಾಮಿ, ಬಸವೇಗೌಡ, H. V. ರಾಜೀವ್, D. B. ನಟೇಶ್, ಮರಿಗೌಡ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ. ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆಯಾಗಿದೆ. ಸರ್ಕಾರಿ ಸ್ವತ್ತು ಕಬಳಿಕೆ ಸಂಚು ನಡೆಸಿರುವ ಪ್ರಕರಣ ಸಂಬಂಧ ಕ್ರಮ ಜರುಗಿಸಿ,
ಕೂಡಲೇ FIR ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಿ. ರಾಜ್ಯಪಾಲರ ಆದೇಶಕ್ಕೆ ಕಾನೂನು ರೀತಿ ಗೌರವ ನೀಡಿ ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆಯ ಮುಖ್ಯಸ್ಥ ಎನ್.ಆರ್.ರಮೇಶ್ ಲೋಕಾಯುಕ್ತದ ಪೋಲೀಸ್ ಅಧೀಕ್ಷಕರು, ಅಪರ ನಿಬಂಧಕರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಡಿಗ್ರಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕೀಚಕ ಅರೆಸ್ಟ್..!