ಬೆಂಗಳೂರು : ವಿಕ್ರಾಂತ್ ರೋಣ, ಡೆಡ್ಲಿ ಸೋಮ ಸಿನಿಮಾ ನಿರ್ಮಾಣ ಮಾಡಿದ್ದ ಖ್ಯಾತ ನಿರ್ಮಾಪಕ ಜಾಕ್ ಮಂಜು ಸೇರಿ ಮೂವರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಮಂಜುನಾಥ್ ಅಲಿಯಾಸ್ ಜಾಕ್ ಮಂಜು, ಬಿ.ಎಸ್. ಸಿದ್ದೇಶ್ವರ ಹಾಗೂ ಶಾಲಿನಿ ಆರ್ಟ್ಸ್ ಮೇಲ್ವಿಚಾರಕ ಮುರಳಿ ಅವರ ಮೇಲೆ ವಂಚನೆ ಆರೋಪ ಕೇಳಿಬಂದಿದ್ದು, ‘ಮಾಯನಗರಿ’ ಸಿನಿಮಾ ಬಿಡುಗಡೆಗೆ ನಿರ್ಮಾಪಕ ಎನ್.ಶಿವಶಂಕರ್ ಎಂಬುವರಿಗೆ ವಂಚಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಿವಶಂಕರ್ ನೀಡಿದ ದೂರಿನ ಮೇರೆಗೆ ಜಾಕ್ ಮಂಜು ಜೊತೆ ಸಿದ್ದೇಶ್, ಮುರುಳಿ ಎಂಬುವವರ ವಿರುದ್ದ ಎಫ್‌ಐಆರ್ ದಾಖಲಾಗಿತ್ತು.
ಈ ಬಗ್ಗೆ ಇದೀಗ ನಿರ್ಮಾಪಕ ಜಾಕ್ ಮಂಜು ಬಿಟಿವಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನನ್ನ ಮೇಲೆ ಬಂದಿರೋ ಆರೋಪ ಸುಳ್ಳು, ಈ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ, ಸುದೀಪ್ ಅವರ ಇನ್ನೂಬ್ಬ ಆಪ್ತ ಸಿದ್ದೇಶ್ ಪಾತ್ರ ಇದೆ. 2023ರಲ್ಲೇ ACP ಗಿರೀಶ್ ಈ ಪ್ರಕರಣ ಸುಖಾಂತ್ಯಗೊಳಿಸಿದ್ರು, ಆಗಲೇ ಎಸಿಪಿ ಗಿರೀಶ್ ನೇತೃತ್ವದಲ್ಲಿ ಸಂಧಾನವೂ ನಡೆದಿತ್ತು, ಈಗ ಸುಖಾಸುಮ್ಮನೆ ಪ್ರಕರಣವನ್ನು ಕೆದಕಲಾಗಿದೆ ಎಂದಿದ್ದಾರೆ.
ಶಿವಶಂಕರ @ ಶಶಾಂಕ ಆರಾಧ್ಯ ದೂರು ನೀಡಿದ್ದರು, ಈ ಸಮಸ್ಯೆ ಈಗಾಗಲೇ ಬಗೆಹರಿದಿದೆ, ಮಾಯಾನಗರಿ ಸಿನಿಮಾದ 8 ಲಕ್ಷ ವಿಚಾರ ಸುದ್ದಿಯಾಗಿತ್ತು ಎಂದು ನಿರ್ಮಾಪಕ ಜಾಕ್ ಮಂಜು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : ನಿಮ್ಮ ಜೊತೆ ನಾವಿದ್ದೇವೆ, ಏನೇ ಪರಿಸ್ಥಿತಿ ಬಂದರೂ ಎದುರಿಸೋಣ – ಸಿಎಂ ಸಿದ್ದುಗೆ ಬಲತುಂಬಿದ ಡಿಕೆಶಿ..!