ಬೆಂಗಳೂರು : ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ಈ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ. ಇದೀಗ ಸಿಎಂ ಸಿದ್ದರಾಮಯ್ಯನನ್ನು ಡಿಸಿಎಂ ಡಿಕೆಶಿ ಭೇಟಿಯಾಗಿ ಬಲತುಂಬಿದ್ದಾರೆ.
ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ, ಕಾನೂನು ಮೂಲಕವೇ ಹೋರಾಟ ಮಾಡೋಣ. ರಾಜಕೀಯವಾಗಿಯೂ ಉತ್ತರ ಕೊಡೋಣ, ಏನೇ ಪರಿಸ್ಥಿತಿ ಬಂದರೂ ಎದುರಿಸೋಣ. ನಿಮ್ಮ ಜೊತೆ ನಾವಿದ್ದೇವೆ, ಇಡೀ ಸಂಪುಟ ಇದೆ, ಕಾಂಗ್ರೆಸ್ ಪಕ್ಷ ಯಾವತ್ತೂ ನಿಮ್ಮ ಜೊತೆ ಇದೆ ಎಂದು ಡಿಸಿಎಂ ಡಿಕೆಶಿ ಸಿಎಂ ಸಿದ್ದರಾಮಯ್ಯಗೆ ಧೈರ್ಯ ತುಂಬಿದ್ದಾರೆ. ಸಿಎಂ ಸಿದ್ದರಾಮಯ್ಯ ಜೊತೆ ಡಿಕೆ ಶಿವಕುಮಾರ್ ಮಹತ್ವದ ಚರ್ಚೆ ನಡೆಸಿದ್ದಾರೆ.
ನಾಳೆ ಹೋರಾಟ ಯಾವ ರೀತಿ ಮಾಡಬೇಕು, ಕಾನೂನು ಮಾರ್ಗದಲ್ಲಿ ಏನೇನು ಹೆಜ್ಜೆ ಇಡ್ಬೇಕು. ಹೈಕೋರ್ಟ್, ವಿಶೇಷ ಕೋರ್ಟ್ಗಳಲ್ಲಿ ಕಾನೂನು ಹೋರಾಟ, ಸೀನಿಯರ್ ವಕೀಲರನ್ನು ನೇಮಿಸಿಕೊಂಡು ವಾದ ಮಾಡುವ ಬಗ್ಗೆ ಚರ್ಚೆ ಮಾಡಿದ್ದಾರೆ. ಕಾನೂನು ತಜ್ಞರನ್ನೂ ಕರೆಸಿಕೊಂಡು ಡಿಕೆಶಿ ಸುಮಾರು ಹೊತ್ತು ಚರ್ಚಿಸಿದ್ದು, ಯಾರು ಎಷ್ಟೇ ಷಡ್ಯಂತ್ರ ಮಾಡಿದ್ರೂ ನಿಮ್ಮನ್ನು ಕೆಳಗಿಳಿಸಲಾಗದು, ಇಡೀ ಸಂಪುಟ ಸದಸ್ಯರು ನಿಮ್ಮ ಜೊತೆಗಿದ್ದಾರೆ ಎಂದು ಭರವಸೆ ಕೊಟ್ಟಿದ್ದಾರೆ.
ಇದನ್ನೂ ಓದಿ : ಖ್ಯಾತ ಗಾಯಕಿ ಪಿ. ಸುಶೀಲಾ ಆಸ್ಪತ್ರೆಗೆ ದಾಖಲು..!