Download Our App

Follow us

Home » ರಾಜ್ಯ » ಖ್ಯಾತ ಗಾಯಕಿ ಪಿ. ಸುಶೀಲಾ ಆಸ್ಪತ್ರೆಗೆ ದಾಖಲು..!

ಖ್ಯಾತ ಗಾಯಕಿ ಪಿ. ಸುಶೀಲಾ ಆಸ್ಪತ್ರೆಗೆ ದಾಖಲು..!

ಬೆಂಗಳೂರು : ಭಾರತೀಯ ಚಿತ್ರರಂಗದ ಅಪ್ರತಿಮ ಹಿನ್ನೆಲೆ ಗಾಯಕಿ ಪಿ ಸುಶೀಲಾ ಅವರನ್ನು ಚನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಖ್ಯಾತ ಗಾಯಕಿ ಪಿ ಸುಶೀಲಾ ಅವರು ಹೊಟ್ಟೆ ನೋವು ಹಾಗೂ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದೀಗ ಪಿ ಸುಶೀಲ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರಿಂದ ಮಾಹಿತಿ ಲಭ್ಯವಾಗಿದೆ.

ಪಿ ಸುಶೀಲಾ ಅವರು ಕನ್ನಡ, ತೆಲಗು, ತಮಿಳು‌, ಸೇರಿದಂತೆ ಹಲವು ಭಾಷೆಗಳಲ್ಲಿ ಸೂಪರ್ ಹಿಟ್ ಹಾಡಿಗೆ ಕಂಠವಾಗಿದ್ದಾರೆ. ಕನ್ನಡದಲ್ಲೇ 5000ಕ್ಕೂ ಹೆಚ್ಚು ಹಾಡುಗಳನ್ನ ಹಾಡಿದ್ದು, ಬಹುತೇಕ ಹಾಡುಗಳು ಸೂಪರ್ ಹಿಟ್ ಆಗಿದೆ.

ಗಾಯನಕ್ಕಾಗಿ 5 ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳನ್ನು ಪಿ. ಸುಶೀಲ ಪಡೆದಿದ್ದಾರೆ. ವಿವಿಧ ಭಾಚೆಗಳಲ್ಲಿ ಹಾಡುಗಳನ್ನು ಹಾಡಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್, ಏಷಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ : ಪ್ರಾಸಿಕ್ಯೂಷನ್​ಗೆ ಕೊಟ್ಟಿರೋದ್ರ ಹಿಂದೆ ಬಿಜೆಪಿ, ಜೆಡಿಎಸ್​ ಕೈವಾಡ ಇದೆ – ಸಚಿವ ಡಾ.ಜಿ ಪರಮೇಶ್ವರ್..!

Leave a Comment

DG Ad

RELATED LATEST NEWS

Top Headlines

ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರದ ರಿಲೀಸ್​ ಡೇಟ್​​ ಅನೌನ್ಸ್..!

ಕಮಲ್ ಹಾಸನ್ ಅಭಿನಯದ ಮತ್ತು ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಚಿತ್ರ ವಿಶ್ವದಾದ್ಯಂತ 2025ರ ಜೂನ್ 5ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಇಂದು ಕಮಲ್ ಹಾಸನ್ ಅವರ ಹುಟ್ಟುಹಬ್ಬದ

Live Cricket

Add Your Heading Text Here