ಹಾವೇರಿ : ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿ ಸಾಗಾಟ ಮಾಡ್ತಿದ್ದ ಘಟನೆ ಹಾವೇರಿಯ ಬಂಕಾಪೂರದಲ್ಲಿ ನಡೆದಿದೆ. ಶಿಗ್ಗಾವಿ ತಹಶೀಲ್ದಾರ್ & ಆಹಾರ ನೀರಿಕ್ಷರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದಾಗ ಬರೋಬ್ಬರಿ 545 ಚೀಲಗಳ ಅನ್ನಭಾಗ್ಯದ ಅಕ್ಕಿ ಪತ್ತೆಯಾಗಿದ್ದು, 545 ಚೀಲಗಳ ಅನ್ನಭಾಗ್ಯದ ಅಕ್ಕಿ ಸಮೇತವಾಗಿ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಹತ್ತಿ ಜೀನ್ನಲ್ಲಿ ಬಡವರ ಅನ್ನಭಾಗ್ಯದ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು. ಜೈನುದ್ದೀನ್ ಮತ್ತು ಸೈಯದ್ ಶಬ್ಬೀರ್ ಎಂಬುವವರು ಅಕ್ಕಿ ಸಾಗಾಟ ಮಾಡಿದ್ದು, ಬಂಕಾಪೂರದಿಂದ ಮಹಾರಾಷ್ಟ್ರ ಸಪ್ಲೈ ಮಾಡಲು ಅಕ್ಕಿಯನ್ನು ಲೋಡ್ ಮಾಡಿಟ್ಟಿದ್ದರು. ಶಿಗ್ಗಾವಿ ತಹಶೀಲ್ದಾರ್ & ಆಹಾರ ನೀರಿಕ್ಷರ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು, ಈ ವೇಳೆ 545 ಚೀಲಗಳಲ್ಲಿ ಅಕ್ಕಿ ಸಾಗಾಟ ಮಾಡ್ತಿದ್ದ ಬೃಹತ್ ಲಾರಿಯನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.
ಹತ್ತಿ ಜೀನ್ ನಲ್ಲೇ ದಂಧೆಕೋರರು ಅಕ್ಕಿ ಪಾಲೀಶ್ ಯಂತ್ರಗಳನ್ನ ಹೊಂದಿದ್ದ. ಹಳ್ಳಿಗಳಲ್ಲಿ ಜನರಿಂದ ಸಂಗ್ರಹವಾಗುವ ಅಂಗಡಿಗಳ ಮೂಲಕ ಅಕ್ಕಿ ಸಂಗ್ರಹ ಮಾಡ್ತಿದ್ದರು. ಈ ಸಂಬಂಧ
ಬಂಕಾಪೂರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮಕ್ಕಳಾಗಿಲ್ಲ ಎಂಬ ಕೊರಗಿನಿಂದ ಉಪನ್ಯಾಸಕ ಆತ್ಮಹತ್ಯೆ!







