ಉಡುಪಿ : ಜಿಲ್ಲೆಯ ಪರ್ಕಳದಲ್ಲಿರುವ ವಿಠಲವಾಡಿ ಗ್ರಾಮದ 52 ವರ್ಷದ ಸುಬ್ರಹ್ಮಣ್ಯ ನಾಯ್ಕ್ ಎಂಬವರು ಶಂಕಿತ ಇಲಿ ಜ್ವರಕ್ಕೆ ಬಲಿಯಾಗಿದ್ದಾರೆ. ಸುಬ್ರಹ್ಮಣ್ಯ ನಾಯ್ಕ್ ಜ್ವರ ಇದ್ದ ಕಾರಣ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಆಸ್ಪತ್ರೆಯಲ್ಲಿ ಇಲಿ ಜ್ವರ ಎಂಬುದು ದೃಢಪಟ್ಟಿತ್ತು.
ಚಿಕಿತ್ಸೆ ಫಲಕಾರಿಯಾಗದೇ ಆ.6ರ ರಾತ್ರಿ ಸುಬ್ರಹ್ಮಣ್ಯ ನಾಯ್ಕ್ ಮೃತಪಟ್ಟಿದ್ದಾರೆ. ಮೃತ ಸುಬ್ರಹ್ಮಣ್ಯ ನಾಯ್ಕ್ ಅವರು ಪರ್ಕಳದಲ್ಲಿ ಶಾಮಿಯಾನ. ಕೇಬಲ್ ಅಳವಡಿಸುವಿಕೆ ಮೊದಲಾದ ನುರಿತ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಇಲಿ ಜ್ವರದ ಲಕ್ಷಣ, ಹರಡುವಿಕೆ : ಇಲಿ, ಹಸು, ನಾಯಿ, ಹಂದಿ ಮೂಲಕವೂ ಇಲಿ ಜ್ವರ ಹಬ್ಬುತ್ತದೆ. ಪರಿಸರ ನೈರ್ಮಲ್ಯದ ಕೊರತೆ, ನೆರೆಹಾವಳಿ ಇಲಿ ಜ್ವರ ಹರಡಲು ಮುಖ್ಯ ಕಾರಣವಾಗಿದೆ. ರೋಗಾಣು ಪ್ರವೇಶಿಸಿದ 2 ರಿಂದ 25 ದಿನಗಳಲ್ಲಿ ತೀವ್ರತರದ ಜ್ವರ ಕಾಡುತ್ತದೆ. ಮೈಕೈ ನೋವು, ತಲೆನೋವು , ಕೆಲವೊಮ್ಮೆ ವಾಂತಿ ಹೊಟ್ಟೆ ನೋವು ಬರುವುದು, ಈ ಜ್ವರದ ಲಕ್ಷಣವಾಗಿದೆ. ರಕ್ತಸ್ರಾವ, ಕಾಮಾಲೆ ಕಾಣಿಸಿಕೊಂಡರೆ ದೇಹದ ಎಲ್ಲಾ ಅಂಗಗಳಿಗೂ ರೋಗಾಣು ಪ್ರವೇಶವಾಗಿ ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪುವ ಅಪಾಯವೂ ಎದುರಾಗುತ್ತದೆ.
ಇದನ್ನೂ ಓದಿ : ಮೈಸೂರಿನಲ್ಲಿಂದು ಕಾಂಗ್ರೆಸ್ ಬೃಹತ್ ಸಮಾವೇಶ – BJP-JDS ಹಗರಣಗಳ ಬಂಡವಾಳ ಬಿಚ್ಚಿಡ್ತಾರಾ ಸಿದ್ದು-ಡಿಕೆಶಿ?