ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿನ ನಿವೇಶನ ಹಂಚಿಕೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.
ಸ್ನೇಹಮಯಿ ಕೃಷ್ಣ ಎಂಬುವರು ದೂರು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಮ್ಮ, ಮಲ್ಲಿಕಾರ್ಜುನ , ನಿಂಗಾ ಅಲಿಯಾಸ್ ಜವರ ಸೇರಿ ಇತರರ ವಿರುದ್ಧ ದೂರು ದಾಖಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು 82ನೇ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ನಡೆಸಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ವಸಂತ್ ಅವರು, ಇವತ್ತು ದಾಖಲೆಗಳ ಪರಿಶೀಲನೆ ಮತ್ತು ಕೆಲ ಅಂಶಗಳ ವಾದಮಂಡನೆ ಮಾಡಿದ್ದೇವೆ. ಕೋರ್ಟ್ ಮತ್ತಷ್ಟು ವಾದ ಮಂಡನೆಗೆ ಅವಕಾಶ ನೀಡಿದ್ದರಿಂದ ನಾಳೆ ವಾದ ಮಂಡನೆ ಮಾಡಲಿದ್ದೇವೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಸಿನಿಮಾ ಸ್ಟೈಲ್ನಲ್ಲಿ ನಟೋರಿಯಸ್ ರೌಡಿಯನ್ನ ಹಿಡಿದ ಕಾನ್ಸ್ಟೇಬಲ್ಗೆ ಪ್ರಶಂಸೆಗಳ ಸುರಿಮಳೆ..!
Post Views: 101