ಒಲಿಂಪಿಕ್ಸ್ 2024ರಿಂದ ಅನರ್ಹಗೊಂಡ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಚಿನ್ನ ತಪ್ಪಿದ ಬೆನ್ನಲ್ಲೇ ವಿನೇಶ್ ಪೋಗಟ್ ಮತ್ತೊಂದು ಶಾಕ್ ಕೊಟ್ಟಿದ್ದಾರೆ.
ವಿನೇಶ್ ಫೋಗಟ್ ಇಂದು ಬೆಳಗ್ಗೆ ಟ್ವೀಟ್ ಮಾಡಿ ನಿವೃತ್ತಿ ಘೋಷಣೆ ಮಾಡಿದ್ದಾರೆ, “ಕ್ಷಮಿಸಿ, ನಿಮ್ಮ ಕನಸು, ನನ್ನ ಧೈರ್ಯ ಎಲ್ಲವೂ ಮರಿದು ಹೋಗಿದೆ. ಈಗ ನನಗೆ ಇದಕ್ಕಿಂತ ಹೆಚ್ಚಿನ ಶಕ್ತಿ ಇಲ್ಲ. 2021-2024 ಕುಸ್ತಿಗೆ ವಿದಾಯ. ನಿಮ್ಮೆಲ್ಲರಿಗೂ ನಾನು ಋಣಿಯಾಗಿರುತ್ತೇನೆ” ಎಂದು ಪೋಸ್ಟ್ ಹಾಕಿದ್ದಾರೆ. 50 ಕೆಜಿಗಿಂತ ಹೆಚ್ಚಿನ ತೂಕ ಹೊಂದಿದ ಕಾರಣಕ್ಕೆ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಹೊರ ಬಿದ್ದಿದ್ದು, ಫೈನಲ್‌ಗೆ ಪ್ರವೇಶ ಪಡೆದಿದ್ದ ಅವರು ಅನರ್ಹಗೊಂಡಿದ್ದರು.
ಫೈನಲ್ ಪಂದ್ಯಕ್ಕೂ ಮುನ್ನ ಕುಸ್ತಿಪಟುಗಳ ತೂಕ ಪರೀಕ್ಷೆ ಮಾಡಲಾಗುತ್ತದೆ. ಮಂಗಳವಾರ ವಿನೇಶ್ ಫೋಗಟ್ ಅವರ ತೂಕ 52 ಕೆಜಿಯಾಗಿತ್ತು. ಅದನ್ನು ಇಳಿಸಲು ಅವರು ರಾತ್ರಿಪೂರ್ತಿ ವಿವಿಧ ವ್ಯಾಯಾಮಗಳನ್ನು ಮಾಡಿದ್ದರು. ಬುಧವಾರ ಬೆಳಗ್ಗೆ ತೂಕ ಚೆಕ್ ಮಾಡಿದಾಗ 50 ಕೆಜಿಗಿಂತ 100 ಗ್ರಾಂ ತೂಕ ಹೆಚ್ಚಿತ್ತು. ಆದ್ದರಿಂದ ಒಲಿಂಪಿಕ್ಸ್‌ನಿಂದ ಅವರು ಅನರ್ಹ ಎಂದು ಘೋಷಣೆ ಮಾಡಲಾಯಿತು.
ಇದನ್ನೂ ಓದಿ : ಸೌತ್ ಫೇಮಸ್ ನಟ ಶ್ರೀ ವಿಷ್ಣು ಜೊತೆ ತೆಲುಗು ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡ್ತಾರಾ ನಟಿ ದಿವ್ಯಾ ಖೋಸ್ಲಾ?