Download Our App

Follow us

Home » ಅಪರಾಧ » ಬೆಂಗಳೂರು : ರೌಡಿಶೀಟರ್ ಹತ್ಯೆ ಕೇಸ್‌ನಲ್ಲಿ ಆರು ಮಂದಿ ಬಂಧನ..!

ಬೆಂಗಳೂರು : ರೌಡಿಶೀಟರ್ ಹತ್ಯೆ ಕೇಸ್‌ನಲ್ಲಿ ಆರು ಮಂದಿ ಬಂಧನ..!

ಬೆಂಗಳೂರು : ಕಳೆದ ತಿಂಗಳ 26ರಂದು ರೌಡಿಶೀಟರ್‌ ಅಜಿತ್ ಎಂಬಾತನನ್ನು ಹಾಡಹಾಗಲೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರು ಆರೋಪಿಗಳನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಗಣೇಶ್ ಹಾಗೂ ಅಜಿತ್‌ ಮಧ್ಯೆ ಗಲಾಟೆಯಾಗಿತ್ತು. ಇದೇ ದ್ವೇಷದ ಮೇರೆಗೆ ಅಜಿತ್, ಗಣೇಶನನ್ನು ಕೊಲೆ ಮಾಡಿದ್ದ. ಈ ಸಂಬಂಧ ಜೈಲಿಗೆ ಹೋಗಿ ಬಳಿಕ ಜಾಮೀನು ಪಡೆದು ಅಜಿತ್  ಜೈಲಿಂದ ಬಿಡುಗಡೆಯಾಗಿದ್ದ.

ಗಣೇಶ್​ನನ್ನು ಕೊಲೆಗೈದಿರುವ ಅಜಿತ್‌ನನ್ನು ಹತ್ಯೆಗೈದು ರಿವೇಂಜ್ ತೀರಿಸಿಕೊಳ್ಳಲು ಗಣೇಶ್ ಕುಟುಂಬ ಹೊಂಚು ಹಾಕಿ ಕಾದು ಕುಳಿತ್ತಿತ್ತು. ಅದರಂತೆ ಕಳೆದ ತಿಂಗಳ 26ರಂದು ಅಜಿತ್​​ ಬೈಕ್​ನಲ್ಲಿ ಹೋಗ್ತಿದ್ದಾಗ ಮತ್ತೊಂದು ಬೈಕ್​​ನಿಂದ ಡಿಕ್ಕಿ ಹೊಡೆಸಿ ನಂತರ ಮಾರಕಾಸ್ತ್ರಗಳಿಂದ ಅಜಿತ್‌ನನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು.

ಈ ಕೊಲೆ ಪ್ರಕರಣ ಬೆನ್ನತ್ತಿದ ಪೊಲೀಸರು ಇದೀಗ ಇಬ್ಬರು ಮಹಿಳೆಯರು ಸೇರಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಗಣೇಶ್ ಅಕ್ಕ ದುರ್ಗಾದೇವಿ, ಪತ್ನಿ ಕೃಪಾ , ಶಿಷ್ಯ ಅಜಯ್ @ಮುಳ್ಳಂದಿ ನರಸಿಂಹ, ಪ್ರಕಾಶ್ ಹಾಗೂ ಅರುಣ್ ಬಂಧಿತರು.

ಇದನ್ನೂ ಓದಿ : ಬೆಳಗಾವಿಯ ಟೇಪ್​ ತಯಾರಿಕಾ ಕಾರ್ಖಾನೆಯಲ್ಲಿ ಭಾರೀ ಅಗ್ನಿ ದುರಂತ – ಹಲವರಿಗೆ ಗಂಭೀರ ಗಾಯ..!

Leave a Comment

DG Ad

RELATED LATEST NEWS

Top Headlines

ರೇಣುಕಾಸ್ವಾಮಿ ಕರೆತಂದಿದ್ದ ಆಟೋಗೆ ರಿಲೀಸ್ ಭಾಗ್ಯ – ಆರೋಪಿ ಜಗದೀಶ್​​ಗೆ ಸೇರಿದ್ದ ವಾಹನ ಬಂಧಮುಕ್ತ!

ಚಿತ್ರದುರ್ಗ : ನಟ ದರ್ಶನ್​ ಮತ್ತು ಗ್ಯಾಂಗ್​ನಿಂದ​ ನಡೆದಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಕೃತ್ಯಕ್ಕೆ ಬಳಸಿದ್ದ ಮೊದಲ ವಾಹನ ರಿಲೀಸ್​ಗೆ ಕೋರ್ಟ್​ ಆದೇಶ ಹೊರಡಿಸಿದೆ. ರೇಣುಕಾಸ್ವಾಮಿ

Live Cricket

Add Your Heading Text Here