Download Our App

Follow us

Home » ಮೆಟ್ರೋ » ರಾಜಸ್ಥಾನದಿಂದ ಬರ್ತಿರೋ ಮಾಂಸ ತಿನ್ನಲು ಯೋಗ್ಯವಾ? ಇಂದು ಆಹಾರ ಇಲಾಖೆ ಕೈ ಸೇರಲಿದೆ ರಿಪೋರ್ಟ್..!

ರಾಜಸ್ಥಾನದಿಂದ ಬರ್ತಿರೋ ಮಾಂಸ ತಿನ್ನಲು ಯೋಗ್ಯವಾ? ಇಂದು ಆಹಾರ ಇಲಾಖೆ ಕೈ ಸೇರಲಿದೆ ರಿಪೋರ್ಟ್..!

ಬೆಂಗಳೂರು : ರಾಜಸ್ಥಾನದಿಂದ ಬಂದ ಮಾಂಸದ ವಿಚಾರದಲ್ಲಿ ಬೆಂಗಳೂರಿನಲ್ಲಿ ಸಾಕಷ್ಟು ವಿವಾದ ಹಾಗೂ ಆತಂಕ ಸೃಷ್ಟಿಯಾಗಿತ್ತು. ಕುರಿ ಮಾಂಸದ ಜೊತೆ ನಾಯಿ ಮಾಂಸ ಮಿಕ್ಸ್ ಮಾಡಿದ್ದಾರೆ ಅಂತ ಪುನೀತ್ ಕೆರೆಹಳ್ಳಿ ಗಂಭೀರ ಆರೋಪ ಮಾಡಿದ್ದರು. ಕುರಿ ಮಾಂಸದ ಜತೆ ನಾಯಿ ಮಾಂಸ ಬೆರೆಸಲಾಗಿದೆ ಎಂಬ ಆರೋಪದ ಬೆನ್ನಲ್ಲೆ ಸತ್ಯ ಸತ್ಯತೆ ತಿಳಿಯಲು ಆಹಾರ ಇಲಾಖೆ ಟೆಸ್ಟಿಂಗ್​ ಮಾಡಲು ಹೈದರಾಬಾದ್​ನ​ ಲ್ಯಾಬ್​ಗೆ ಸ್ಯಾಂಪಲ್ ಕಳಿಹಿಸಲಾಗಿತ್ತು. ಈ ICAR ವರದಿಯಲ್ಲಿ ಜೈಪುರದಿಂದ ಬಂದಿದ್ದು ಮೇಕೆ ಮಾಂಸ ವರದಿಯಲ್ಲಿ ಖಚಿತವಾಗಿತ್ತು.

ಆದರೆ ಇಷ್ಟಕ್ಕೆ ಸುಮ್ಮನಿರದ ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆ ಮಾಂಸದ ಶುಚಿತ್ವ ಮತ್ತು ಬ್ಯಾಕ್ಟೀರಿಯಾ ಬೆಳವಣಿಗೆ ವರದಿ ಪಡೆಯುವ ನಿಟ್ಟಿನಲ್ಲಿ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಕಳುಹಿಸಲಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಸೂಕ್ಷ್ಮಾಣು ಜೀವ ವಿಜ್ಞಾನ ಪ್ರಯೋಗಾಲದಿಂದ ರಿಪೋರ್ಟ್ ಬರಲಿದೆ. ಈ ರಿಪೋರ್ಟ್​ನಲ್ಲಿ ಮಾಂಸದ ಶುಚಿತ್ವ ಮತ್ತು ಬ್ಯಾಕ್ಟೀರಿಯಾ ಬೆಳವಣಿಗೆ ಸಂಬಂಧ ವರದಿ ಇರಲಿದೆ.

ಇಂದು ಮಾಂಸದ ಸೇಫ್ಟಿ ರಿಪೋರ್ಟ್ ಇಲಾಖೆ ಕೈ ಸೇರಲಿದೆ. ಹೀಗಾಗಿ ಆಹಾರ ಇಲಾಖೆ ಅಧಿಕಾರಿಗಳು ಲ್ಯಾಬ್ ರಿಪೋರ್ಟ್‌ಗೆ ಕಾಯುತ್ತಿದ್ದು, ಈ ಮೂಲಕ ಕಳಪೆ ಮಾಂಸದ ಸೀಕ್ರೆಟ್ ಇಂದೇ ಬಯಲಾಗುತ್ತಾ ಎಂಬುದನ್ನು ಕಾದುನೋಡಬೇಕಾಗಿದೆ. ಇಷ್ಟು ಮಾತ್ರವಲ್ಲದೇ ರಾಜಸ್ಥಾನದಿಂದ ಬರ್ತಿರೋ ಮಾಂಸ ತಿನ್ನಲು ಯೋಗ್ಯವಾ. ಬೆಂಗಳೂರಿಗರು ತಿನ್ನುತ್ತಿರುವ ಜೈಪುರ ಮಾಂಸ ಎಷ್ಟು ಸೇಫ್ ಎಂಬ ಅಸಲಿಯತ್ತು ಈ ವರದಿ ಬಹಿರಂಗ ಮಾಡುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.

ಇದನ್ನೂ ಓದಿ : ಯಾದಗಿರಿ PSI ಬೆನ್ನಲ್ಲೇ ಬೆಂಗಳೂರು ಸಿಸಿಬಿ ಪೊಲೀಸ್ ಇನ್ಸ್​ಪೆಕ್ಟರ್ ಆತ್ಮಹತ್ಯೆ..!

Leave a Comment

DG Ad

RELATED LATEST NEWS

Top Headlines

ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರದ ರಿಲೀಸ್​ ಡೇಟ್​​ ಅನೌನ್ಸ್..!

ಕಮಲ್ ಹಾಸನ್ ಅಭಿನಯದ ಮತ್ತು ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಚಿತ್ರ ವಿಶ್ವದಾದ್ಯಂತ 2025ರ ಜೂನ್ 5ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಇಂದು ಕಮಲ್ ಹಾಸನ್ ಅವರ ಹುಟ್ಟುಹಬ್ಬದ

Live Cricket

Add Your Heading Text Here