Download Our App

Follow us

Home » ಸಿನಿಮಾ » ‘ಗೋಪಿಲೋಲ’ ಚಿತ್ರದ ಸ್ಪೆಷಲ್ ನಂಬರ್ ರಿಲೀಸ್ – ನಾಯಕನ ಜೊತೆ ಜಾಹ್ನವಿ ಬಿಂದಾಸ್ ಸ್ಟೆಪ್ಸ್..!

‘ಗೋಪಿಲೋಲ’ ಚಿತ್ರದ ಸ್ಪೆಷಲ್ ನಂಬರ್ ರಿಲೀಸ್ – ನಾಯಕನ ಜೊತೆ ಜಾಹ್ನವಿ ಬಿಂದಾಸ್ ಸ್ಟೆಪ್ಸ್..!

ಯುವ ಪ್ರತಿಭೆ ಮಂಜುನಾಥ್ ಅರಸು ನಾಯಕನಾಗಿ ನಟಿಸುತ್ತಿರುವ ಗೋಪಿಲೋಲ ಸಿನಿಮಾದ ಸ್ಪೆಷಲ್ ನಂಬರ್ ರಿಲೀಸ್ ಆಗಿದೆ. ಈ ಚಿತ್ರ ಆರ್ ರವೀಂದ್ರ ನಿರ್ದೇಶನದಲ್ಲಿ ಮೂಡಿ ಬರ್ತಿದ್ದು,  ಕಣ್ ಕಣ್ ಟಾಕಿಂಗ್, ಕೈ ಕೈ ಟಚ್ಚಿಂಗ್ ಎಂಬ ಹಾಡಿಗೆ ಕೇಶವ ಚಂದ್ರ ಸಾಹಿತ್ಯ ಬರೆದಿದ್ದಾರೆ. ಮಿದುನ್ ಅಸೋಕನ್ ಚೆನ್ನೈ ಸಂಗೀತ ಒದಗಿಸಿದ್ದು, ಶಶಾಂಕ್ ಶೇಷಗಿರಿ ಹಾಗೂ ಗೀತಾ ಭಟ್ ಧ್ವನಿಯಾಗಿದ್ದಾರೆ. ಧನಂಜಯ್ ನೃತ್ಯ ಸಂಯೋಜನೆಗೆ ನಾಯಕ ಮಂಜುನಾಥ್ ಅರಸು ಹಾಗೂ ಜಾಹ್ನವಿ ಹೆಜ್ಜೆ ಹಾಕಿದ್ದಾರೆ.

ಸಹಜ ಕೃಷಿ ಹಾಗೂ ಪ್ರೇಮ ಕಥಾ ಹಂದರ ಹೊಂದಿರುವ ಗೋಪಿಲೋಲ ಸಿನಿಮಾಗೆ ಎಸ್.ಆರ್ ಸನತ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸಹ ನಿರ್ಮಾಪಕರಾಗಿ ನಾಯಕ ಮಂಜುನಾಥ್ ಸಾಥ್ ಕೊಟ್ಟಿದ್ದಾರೆ‌. ಮಂಜುನಾಥ್ ಗೆ ಜೋಡಿಯಾಗಿ ನಿಮಿಷಾ ಕೆ ಚಂದ್ರ ಅಭಿನಯಿಸ್ತಿದ್ದು, ನಟಿ ಜಾಹ್ನವಿ, ಎಸ್.ನಾರಾಯಣ್, ಪದ್ಮಾ ವಸಂತಿ, ನಾಗೇಶ್ ಯಾದವ್, ಸ್ವಾತಿ, ಹಿರಿಯ ನಿರ್ದೇಶಕ ಜೋಸೈಮನ್ ಸೇರಿದಂತೆ ತೆಲುಗು ನಟ ಸಪ್ತಗಿರಿ ತಾರಾಬಳಗದಲ್ಲಿದ್ದಾರೆ.

ಗೋಪಿಲೋಲ ಸಿನಿಮಾಗೆ ಕೇಶವಚಂದ್ರ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಕೆಎಂ ಪ್ರಕಾಶ್ ಸಂಕಲನ, ಮಿದುನ್ ಅಸೋಕನ್ ಚೆನ್ನೈ ಸಂಗೀತ, ರಾಕೇಶ್ ಆಚಾರ್ಯ ಹಿನ್ನೆಲೆ ಸಂಗೀತ, ಸೂರ್ಯಕಾಂತ್ ಎಚ್ ಕ್ಯಾಮೆರಾ ವರ್ಕ್, ಥ್ರಿಲ್ಲರ್ ಮಂಜು, ಜಾನಿ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.

ನಿರ್ದೇಶಕ ಆರ್ ರವೀಂದ್ರ ಈ ಹಿಂದೆ ಕನ್ನಡದಲ್ಲಿ ಛಲಗಾರ, ಸರ್ಕಾರಿ ಕೆಲಸ ದೇವರ ಕೆಲಸ, ಮನಸ್ಸಿನಾಟ, ಬಂಗಾರದ ಮಕ್ಕಳು, ಮರಾಠಿಯಲ್ಲಿ ಫೆಬ್ರವರಿ 14, ಮಿಷನ್ ಅಂಬ್ಯುಲೆನ್ಸ್ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇದೀಗ ಗೋಪಿಲೋಲ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಪ್ರಚಾರ ಕೆಲಸದಲ್ಲಿ ಬ್ಯುಸಿಯಾಗಿದೆ.

ಇದನ್ನೂ ಓದಿ : ವಿಜಯೇಂದ್ರ ಹಾಗೂ ಡಿಸಿಎಂ ಡಿಕೆಶಿ ಇಬ್ಬರು ಭಷ್ಟ್ರರೇ – ಶಾಸಕ ಯತ್ನಾಳ್ ಗುಡುಗು..!

Leave a Comment

DG Ad

RELATED LATEST NEWS

Top Headlines

ಸರ್ಜರಿ ಬಳಿಕ ನಟ ಶಿವಣ್ಣ ರಿಲ್ಯಾಕ್ಸ್ – ಸಮುದ್ರ ತಟದಲ್ಲಿ ಪತ್ನಿ ಜೊತೆ ಜಾಲಿ ರೌಂಡ್ಸ್​​!

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ಸರ್ಜರಿ ಬಳಿಕ ಅಮೆರಿಕಾದಲ್ಲಿ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಶಸ್ತ್ರಚಿಕಿತ್ಸೆ ನಂತ್ರ ಚೇತರಿಕೆ ಕಂಡಿರುವ ಹ್ಯಾಟ್ರಿಕ್ ಹೀರೋ ಪತ್ನಿ ಜೊತೆ ಅಮೆರಿಕದ ಕಡಲ

Live Cricket

Add Your Heading Text Here