ಕಲಬುರಗಿ : ಹೆಂಡತಿಯಿಂದಲೇ ಗಂಡನ ಬರ್ಬರ ಹತ್ಯೆಯಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಆಟೋ ಚಾಲಕನಾಗಿ ಕೆಲಸ ಮಾಡ್ತಿದ್ದ 26 ವರ್ಷದ ಈಶ್ವರ್ ಮೃತ ದುರ್ದೈವಿ. ಕಳೆದ 5 ವರ್ಷದ ಹಿಂದೆ ರಂಜಿತಾ ಜೊತೆ ಈಶ್ವರ್ ಮದುವೆಯಾಗಿದ್ದು, ಆಗಾಗ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಹಾಗಾಗಿ ರಂಜಿತಾ ತಾಯಿ ಮನೆ ಸೇರಿದ್ದಾಳೆ.
ಈಶ್ವರ್ ನಿನ್ನೆ ರಾತ್ರಿ ಮಗುವನ್ನ ನೋಡಲು ಪತ್ನಿ ರಂಜಿತಾ ಮನೆಗೆ ತೆರಳಿದ್ದಾಗ ಪತ್ನಿ ಗಲಾಟೆ ಮಾಡಿದ್ದಾಳೆ. ಈ ವೇಳೆ ಹೆಂಡತಿ ಮತ್ತು ಆಕೆ ಮನೆಯವರು ಈಶ್ವರ್ನ ಕೈ ಕಾಲು ಕಟ್ಟಿಹಾಕಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಆರ್. ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದೀಪಿಕಾ ಪಡುಕೋಣೆಗೆ ಗಂಡು ಮಗು ಜನನ – ತಾಯಿ ಮಗುವಿನ ಫೋಟೋ ವೈರಲ್..!
Post Views: 315