ಬೆಂಗಳೂರು : ಸ್ವಪಕ್ಷದ ನಾಯಕರ ವಿರುದ್ಧವೇ ಮಾಜಿ ಸಚಿವ ಅರವಿಂದ ಲಿಂಬಾವಳಿ ಕಿಡಿಕಾರಿದ್ದು, ಆರ್.ಅಶೋಕ್, ವಿಜಯೇಂದ್ರ ವಿರುದ್ಧ ಲಿಂಬಾವಳಿ ರೊಚ್ಚಿಗೆದ್ದಿದ್ದಾರೆ. ಸದನ ಒಂದು ದಿನ ಸದನ ಮೊಟಕಾಗಿದ್ದಕ್ಕೆ ಇವರೇ ಕಾರಣ, ಆರ್.ಅಶೋಕ್, ವಿಜಯೇಂದ್ರ ನಡುವೆ ಸಮನ್ವಯತೆಯ ಕೊರತೆಯಿದೆ ಎಂದು ಅಶೋಕ್, ವಿಜಯೇಂದ್ರ ವಿರುದ್ಧ ಲಿಂಬಾವಳಿ ಆರೋಪಗಳ ಸುರಿಮಳೆ ಸುರಿಸಿದ್ದಾರೆ.
ವಿಧಾನನ ಮಂಡಲದ ಮುಂಗಾರು ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಎಕ್ಸ್‌ನಲ್ಲಿ ಸುದೀರ್ಘ ಬರಹ ಬರೆದು ಅಸಮಾಧ ಹೊರಹಾಕಿರುವ ಲಿಂಬಾವಳಿ ರಾಜ್ಯದಲ್ಲಿ ಡೆಂಘೀ, ನೆರೆ ತಾಂಡವಾಡ್ತಿದೆ. ಆದ್ರೆ, ನಮ್ಮ ನಾಯಕರು ಇದರ ಬಗ್ಗೆ ಮಾತನಾಡಲಿಲ್ಲ, ಅದೆಷ್ಟೋ ರೈತರಿಗೆ ಈ ಹಿಂದಿನ ಬರ ಪರಿಹಾರವೇ ಸಿಕ್ಕಿಲ್ಲ, ಸದನದ ಮೊಟಕುಗೊಳಿಸುವಲ್ಲಿ ಆಡಳಿತ ಪಕ್ಷದವರೊಂದಿಗೆ ಕೈಜೋಡಿಸಿದೆ. ಸದನವನ್ನು ಸಮರ್ಪಕವಾಗಿ ಬಳಸಿಕೊಳ್ಳದೇ, ಕಾಲಹರಣ ಮಾಡಿದ್ದಾರೆ, ಯಾವ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಮ್ಮ ಪಕ್ಷ ವಿಫಲವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಜೊತೆ ಪ್ರತಿಪಕ್ಷ ಶಾಮೀಲಾಗಿದ್ಯಾ ಎಂದು ಜನ ಮಾತನಾಡಿಕೊಳ್ತಿದ್ದಾರೆ, ಮುಡಾ ವಿರುದ್ಧ ನಡೆಸಿದ ಹೋರಾಟ ಕಣ್ಣೊರೆಸುವ ತಂತ್ರದಂತೆ ಕಂಡಿತು? ಈ ಬಾರಿಯ ಅಧಿವೇಶನದಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಅಧಿವೇಶನದಲ್ಲಿ ನಾಯಕರ ನಡೆ ಗಮನಿಸಿದರೆ, ಮುಂದೆ ತುಂಬಾ ಕಷ್ಟವಾಗುತ್ತೆ, ಮುಂದಿನ ದಿನಗಳಲ್ಲಿ ಬಿಜೆಪಿ ಜನಪರ ಹೋರಾಟಗಳನ್ನ ಹೇಗೆ ಮಾಡುತ್ತದೆ? ಜನರ ಆಶೋತ್ತರಗಳಿಗೆ ದನಿಯಾಗುತ್ತಿದ್ದ ಬಿಜೆಪಿಯ ದಿಕ್ಕೇ ಬದಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಕೆ.ಆರ್.ಜಿ ಕನೆಕ್ಟ್ಸ್ಗೆ 4 ವರ್ಷಗಳ ಸಂಭ್ರಮ – ಹೊಸ ಲೋಗೋ ರಿಲೀಸ್..!