ಬೆಂಗಳೂರು : ಅಬಕಾರಿ ಇಲಾಖೆಯಿಂದ ಯಾವುದೇ ಲೈಸೆನ್ಸ್ ಪಡೆಯದೇ ಅಕ್ರಮವಾಗಿ ರೆಸ್ಟೋರೆಂಟ್ನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಸಂಬಂಧ “ದಿ ಸಿಕ್ರೇಟ್ ಪ್ಲೇಸ್ ರೆಸ್ಟೋರೆಂಟ್’ ಹಾಗೂ ಅಬಕಾರಿ ಇನ್ಸ್ಪೆಕ್ಟರ್ ರವೀಶ್ ವಿರುದ್ಧ ದೂರು ದಾಖಲಾಗಿದೆ.
ಅನ್ನಪೂರ್ಣೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ‘ದಿ ಸಿಕ್ರೇಟ್ ಪ್ಲೇಸ್ ರೆಸ್ಟೋರೆಂಟ್’ನಲ್ಲಿ ಯಾವುದೇ ಲೈಸೆನ್ಸ್ ಇಲ್ಲದೆ ಕಾಲೇಜಿನ ವಿಧ್ಯಾರ್ಥಿಗಳಿಗೆ, ಅಪ್ರಾಪರಿಗೆ ಎಣ್ಣೆ ಸಪ್ಲೈ ಮಾಡಲಾಗುತ್ತಿತ್ತು. ಈ ಬಗ್ಗೆ ರೆಸ್ಟೋರೆಂಟ್ ವಿರುದ್ದ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ದೂರು ಕೊಟ್ರೂ ಕೂಡ ಈವರೆಗೆ ಕ್ರಮ ಆಗಿರಲಿಲ್ಲ. ಅಬಕಾರಿ ಇನ್ಸ್ಪೆಕ್ಟರ್ ರವೀಶ್ಗೂ ಈ ಬಗ್ಗೆ ಮಾಹಿತಿ ಕೊಟ್ರೂ ಯಾವುದೇ ರೆಸ್ಪಾನ್ಸ್ ಇರ್ಲಿಲ್ಲ.
ಸದ್ಯ ಚಂದನ್ ಎಂಬವರು ಅಕ್ರಮ ಮದ್ಯ ಪೂರೈಕೆ ಬಗ್ಗೆ ಅಬಕಾರಿ ಇನ್ಸ್ಪೆಕ್ಟರ್ ರವೀಶ್ ಹಾಗೂ ರೆಸ್ಟೋರೆಂಟ್ ಮಾಲೀಕನ ವಿರುದ್ದ ಅಬಕಾರಿ ಉಪ ಆಯುಕ್ತರಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ನಿಸರ್ಗ ಫ್ಯಾಮಿಲಿ ರೆಸ್ಟೋರೆಂಟ್ ಸೇರಿ ಹಲವು ಕಡೆ ಇದೇ ದಂಧೆ ನಡೆಯುತ್ತಿದ್ದು, ನಿಸರ್ಗ ಫ್ಯಾಮಿಲಿ ಒಳಗೆ ಕುಳಿತು ರವೀಶ್ ಮತ್ತು ರೆಸ್ಟೋರೆಂಟ್ ಮಾಲೀಕರ ಡೀಲ್ ಈ ಬಗ್ಗೆ ಡೀಲ್ ಮಾಡಿಕೊಂಡಿದ್ದರು. ಮಂತ್ಲಿ ಫಿಕ್ಸ್ ಮಾಡಿಕೊಂಡು ಅನಧಿಕೃತವಾಗಿ ಎಣ್ಣೆ ಸಪ್ಲೈಗೆ ಅಬಕಾರಿ ಇನ್ಸ್ಪೆಕ್ಟರ್ ರವೀಶ್ ಪರ್ಮಿಷನ್ ಕೊಟ್ಟಿದ್ದ. ತನ್ನ ವ್ಯಾಪ್ತಿಯ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಮದ್ಯ ಮಾರಲು ರವೀಶ್ ಸಪೋರ್ಟ್ ಮಾಡುತ್ತಿದ್ದ. ಈ ತಿಂಗಳ ಅಂತ್ಯದಲ್ಲಿ ಇನ್ಸ್ಪೆಕ್ಟರ್ ರವೀಶ್ ಟ್ರಾನ್ಸ್ಫರ್ ಆಗ್ತಿದ್ದು, ಇದೀಗ ಅಬಕಾರಿ ಉಪಾಯುಕ್ತರಿಗೆ ರವೀಶ್ ವಿರುದ್ಧ ದೂರು ನೀಡಲಾಗಿದೆ.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಶೂಟೌಟ್ - ಚಿಕ್ಕಪ್ಪನಿಂದಲೇ ಅಣ್ಣನ ಮಗನ ಕೊಲೆ..!