Download Our App

Follow us

Home » ಅಪರಾಧ » ನಮ್ಮ ಕುಟುಂಬದ ಮೇಲೆ ವೈಯಕ್ತಿಕ ಷಡ್ಯಂತ್ರ ನಡೀತಿದೆ – ಸೂರಜ್ ರೇವಣ್ಣ..!

ನಮ್ಮ ಕುಟುಂಬದ ಮೇಲೆ ವೈಯಕ್ತಿಕ ಷಡ್ಯಂತ್ರ ನಡೀತಿದೆ – ಸೂರಜ್ ರೇವಣ್ಣ..!

ಬೆಂಗಳೂರು : ಸಲಿಂಗ ಕಾಮ ಪ್ರಕರಣದಲ್ಲಿ ಜೈಲು ಸೇರಿದ್ದ ಜೆಡಿಎಸ್‌ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣಗೆ ನಿನ್ನೆ ಜಾಮೀನು ಮಂಜೂರಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಇದೀಗ ಸೂರಜ್ ರೇವಣ್ಣ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಸೂರಜ್ ರೇವಣ್ಣ ಮಾತನಾಡಿ, ಹಾಸನದಲ್ಲಿ ನಮ್ಮ ಕುಟುಂಬದ ಮೇಲೆ ಕಪ್ಪು ಚುಕ್ಕೆ ಇಲ್ಲ, ನಮ್ಮ ಕುಟುಂಬದ ಮೇಲೆ ವೈಯಕ್ತಿಕ ಷಡ್ಯಂತ್ರ ನಡೀತಿದೆ. ನಮ್ಮ ರಾಜಕೀಯ ಜೀವನ ಕುಸಿತಗೊಳಿಸಲು ಯತ್ನ ನಡೀತಿದೆ, ನಾವು ಎಲ್ಲೂ ಹೋಗಲ್ಲ ಮೂರುನಾಲ್ಕು ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಕೊಡುತ್ತೆವೆಂದು ಎಂದು ಹೇಳಿದ್ದಾರೆ.

ಸೂರಜ್ ರೇವಣ್ಣ‌ ವಿರುದ್ಧ ಹೊಳೆನರಸೀಪುರ ಗ್ರಾಮೀಣ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಎರಡು ಪ್ರಕರಣಗಳಲ್ಲಿ ಸೂರಜ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಗುರುವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಎರಡು ಜಾಮೀನು ಅರ್ಜಿಗಳ ವಿಚಾರಣೆ ನಡೆಸಿ ಕೋರ್ಟ್ ಆದೇಶ ಕಾಯ್ದಿರಿಸಿತ್ತು. ನಿನ್ನೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ​ ಸೂರಜ್ ರೇವಣ್ಣ‌ಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. ಒಂದು ಪ್ರಕರಣದಲ್ಲಿ ಮಾತ್ರ ಜಾಮೀನು ಮಂಜೂರಾಗಿದೆ.

ಇದನ್ನೂ ಓದಿ : ಇದು ರಾಜಕೀಯ ಬಜೆಟ್‌ ಅಲ್ಲ, ರಾಷ್ಟ್ರೀಯ ಬಜೆಟ್‌, ವಿಕಸಿತ ಭಾರತದ ಬಜೆಟ್ : ಸಂಸದ ಡಾ.ಕೆ.ಸುಧಾಕರ್‌..!

Leave a Comment

DG Ad

RELATED LATEST NEWS

Top Headlines

ರಾಜ್ಯ ಸಾರಿಗೆ ನೌಕರರ ಮುಷ್ಕರ ಬಹುತೇಕ ಕ್ಯಾನ್ಸಲ್​ – ನಾಳೆಯೇ ಅಧಿಕೃತ ಪ್ರಕಟ ಸಾಧ್ಯತೆ!

ಬೆಂಗಳೂರು: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ಕರೆ ನೀಡಿದ್ದ ಮುಷ್ಕರ ಬಹುತೇಕ ಕ್ಯಾನ್ಸಲ್​ ಆಗುವ ಸಾಧ್ಯತೆ ಇದೆ. ನೌಕರರು ಕರೆ ನೀಡಿದ್ದ ಮುಷ್ಕರದ

Live Cricket

Add Your Heading Text Here