ಮಂಡ್ಯ : ರಾಜ್ಯದ ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಹಲವು ಜಲಾಶಯಗಳು ಈಗಾಗಲೇ ಭರ್ತಿಯಾಗುವ ಹಂತ ತಲುಪಿವೆ. ಕೆಆರ್‌ಎಸ್ ಭರ್ತಿಯಾಗಲು ಕ್ಷಣಗಣನೆ ಶುರುವಾಗುತ್ತಿದ್ದಂತೆ, ನದಿಗಳಿಗೆ 27 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಕೆಆರ್‌ಎಸ್ ಡ್ಯಾಂನ ಒಳ ಹರಿವು ಹೆಚ್ಚಾದಂತೆ ಹೊರ ಹರಿವಿನಲ್ಲೂ ಹೆಚ್ಚಳವಾಗಿದೆ. ಸದ್ಯ ಡ್ಯಾಂ ಒಳ ಹರಿವು 69,617 ಕ್ಯೂಸೆಕ್ಗೆ ಏರಿಕೆಯಾಗಿದೆ. ನಿನ್ನೆ KRS ಡ್ಯಾಂ ನೀರಿನ ಮಟ್ಟ 119 ಅಡಿಯಿತ್ತು. ಭಾರೀ ಪ್ರಮಾಣದಲ್ಲಿ ನೀರಿನ ಒಳ ಹರಿವು 51,375 ಕ್ಯೂಸೆಕ್ಗೆ ತಲುಪಿತ್ತು. ಇದೀಗ ಡ್ಯಾಂ 122.70 ಅಡಿ ಭರ್ತಿಯಾಗಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಡ್ಯಾಂನಿಂದ ಸದ್ಯ 27 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ.
ಈಗಾಗಲೇ ಪ್ರವಾಹ ಮುನ್ನೆಚ್ಚರಿಕೆ ಸೂಚನೆ ನೀಡಿರುವ ಅಧಿಕಾರಿಗಳು, ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಮೇಲೆ ಜನ ಸಂಚಾರಕ್ಕೆ ನಿರ್ಬಂಧ ಏರಿದ್ದಾರೆ. ಇದರೊಂದಿಗೆ KRS ಡ್ಯಾಂನ ನೀರಿನ ಮಟ್ಟ ಏರಿಕೆಯಿಂದ ರಂಗನತಿಟ್ಟು ಪಕ್ಷಿಧಾಮ, ಸಂಗಮ ಘೋಸಾಯ್ ಘಾಟ್ ಜಲಾವೃತವಾಗುವ ಸಾಧ್ಯತೆಯಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ.
KRS ಡ್ಯಾಂನ ಇಂದಿನ ನೀರಿನ ಮಟ್ಟ
- ಗರಿಷ್ಠ ಮಟ್ಟ- 124.80 ಅಡಿ.
- ಇಂದಿನ ಮಟ್ಟ – 122.70 ಅಡಿ.
- ಗರಿಷ್ಠ ಸಾಂದ್ರತೆ – 49.453 ಟಿಎಂಸಿ.
- ಇಂದಿನ ಸಾಂದ್ರತೆ – 46.567 ಟಿಎಂಸಿ
- ಒಳ ಹರಿವು – 69,617 ಕ್ಯೂಸೆಕ್
- ಹೊರ ಹರಿವು – 27,184 ಕ್ಯೂಸೆಕ್
ಇದನ್ನೂ ಓದಿ : ಭಾರ್ಗವ್ ಕೃಷ್ಣ ಅಭಿನಯದ “ಓಂ ಶಿವಂ” ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ – ಸಿನಿಮಾ ಆಗಸ್ಟ್ನಲ್ಲಿ ತೆರೆಗೆ..!