Download Our App

Follow us

Home » ರಾಜಕೀಯ » ಅಧಿವೇಶನಕ್ಕೆ ಆಗಮಿಸೋ ಶಾಸಕರಿಗೆ ಭಾಗ್ಯದ ಮೇಲೆ ಭಾಗ್ಯ – ಊಟ, ತಿಂಡಿ ಜೊತೆಗೆ ನಿದ್ದೆಗೂ ವಿಶೇಷ ಕುರ್ಚಿ ವ್ಯವಸ್ಥೆ ಮಾಡಿದ ಸ್ಪೀಕರ್..!

ಅಧಿವೇಶನಕ್ಕೆ ಆಗಮಿಸೋ ಶಾಸಕರಿಗೆ ಭಾಗ್ಯದ ಮೇಲೆ ಭಾಗ್ಯ – ಊಟ, ತಿಂಡಿ ಜೊತೆಗೆ ನಿದ್ದೆಗೂ ವಿಶೇಷ ಕುರ್ಚಿ ವ್ಯವಸ್ಥೆ ಮಾಡಿದ ಸ್ಪೀಕರ್..!

ಬೆಂಗಳೂರು : ವಿಧಾನಸಭೆ ಅಧಿವೇಶನಕ್ಕೆ ಆಗಮಿಸೋ ಶಾಸಕರಿಗೆ ಭಾಗ್ಯದ ಮೇಲೆ ಭಾಗ್ಯ ಸಿಕ್ಕಿದೆ. ಸ್ಪೀಕರ್ ಯು.ಟಿ ಖಾದರ್ ಅವರು ಶಾಸಕರಿಗೆ ಊಟ, ತಿಂಡಿ ಜೊತೆಗೆ ನಿದ್ದೆಗೂ ವಿಶೇಷ ಕುರ್ಚಿ ವ್ಯವಸ್ಥೆ ಮಾಡಿದ್ದಾರೆ. ಮಧ್ಯಾಹ್ನ ಊಟ ಆದ ಬಳಿಕ ಕಿರು ನಿದ್ರೆಗೆ ( ನ್ಯಾಪ್) ವಿಲಾಸಿ ಖುರ್ಚಿಯ ವ್ಯವಸ್ಥೆ ಮಾಡಲಾಗಿದೆ.

ಸದ್ಯ ಪ್ರಾಯೋಗಿಕವಾಗಿ ಒಂದು ಕುರ್ಚಿಯನ್ನು ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಕುಳಿತುಕೊಳ್ಳಲು ಹಾಗೂ ಮಲಗಲು ಅವಕಾಶ ಆಗುವಂತಹ ಐಶಾರಾಮಿ ಕುರ್ಚಿಯನ್ನು ಮೊಗಸಾಲೆಯಲ್ಲಿ ಹಾಕಲು ಸ್ಪೀಕರ್ ಯು.ಟಿ ಖಾದರ್ ನಿರ್ಧಾರ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಹೆಚ್ಚಳ ಮಾಡಲು ಸ್ಪೀಕರ್ ಖಾದರ್ ಹಲವು ಪ್ರಯೋಗಗಳನ್ನು ನಡೆಸಿದ್ದಾರೆ. ಸದನ ಬೇಗ ಆರಂಭವಾಗುವ ನಿಟ್ಟಿನಲ್ಲಿ ಶಾಸಕರಿಗೆ ಉಚಿತ ತಿಂಡಿ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮಧ್ಯಾಹ್ನದ ಊಟಕ್ಕೆ ಹೊರಗಡೆ ಹೋಗುವ ಅಗತ್ಯವಿಲ್ಲ. ಇದರಿಂದಾಗಿ ಸದನದಲ್ಲಿ ಹೆಚ್ಚು ಸಮಯ ಚರ್ಚೆ ನಡೆಸಲು ಅವಕಾಶ ಆಗಲಿದೆ ಎಂಬುದು ಉದ್ದೇಶವಾಗಿದೆ.

ಇದನ್ನೂ ಓದಿ : ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಆನಂದ್ ಮೇಲೆ ಲೋಕಾ ರೇಡ್..!

Leave a Comment

DG Ad

RELATED LATEST NEWS

Top Headlines

ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಪ್ರಶ್ನೆ ಇಲ್ಲವೇ ಇಲ್ಲ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ..!

ಬೆಂಗಳೂರು : ರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿರುವ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಸ್ಥಗಿತವಾಗುತ್ತದೆಯೇ ಎಂಬ ಸುದ್ದಿಗಳು ಹರಿದಾಡುತ್ತಿವೆ, ಇದರ ಬೆನ್ನಲ್ಲಿಯೇ ಸಿಎಂ ಸಿದ್ದರಾಮಯ್ಯ

Live Cricket

Add Your Heading Text Here