ಬೆಂಗಳೂರು : ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಕರ್ನಾಟಕಾದ್ಯಂತ ದಾಳಿ ಮಾಡಿದ್ದು, 12 ಜನ ಭ್ರಷ್ಟ ಅಧಿಕಾರಿಗಳಿಗೆ ಸೇರಿದ 54 ಕಡೆಗಳಲ್ಲಿ 100ಕ್ಕೂ ಹೆಚ್ಚು ಲೋಕಾ ಅಧಿಕಾರಿಗಳು ರೇಡ್ ಮಾಡಿ ಶೋಧ ನಡೆಸುತ್ತಿದ್ದಾರೆ.
ಬೆಂಗಳೂರು ನಗರದ ಆರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರು, ಶಿವಮೊಗ್ಗ ಜಿಲ್ಲೆಯ ಇಬ್ಬರು, ಯಾದಗಿರಿ, ತುಮಕೂರಿನಲ್ಲಿ ತಲಾ ಓರ್ವ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಲೋಕಾಯುಕ್ತ SP-1 ಶ್ರೀನಾಥ್ ಜೋಶಿ ನೇತೃತ್ವದಲ್ಲಿ ರೇಡ್ ಮಾಡಲಾಗಿದ್ದು, ಬೆಂಗಳೂರು ಲೋಕಾಯುಕ್ತ SP-2 ವಂಶಿಕೃಷ್ಟ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಯಾರ್ಯಾರ ಮೇಲೆ ದಾಳಿ?
- ಬೆಂಗಳೂರು ಸಿಟಿ – ಆನಂದ್ ಸಿ ಎಲ್ – ಕಮೀಷನರ್ ಮಂಗಳೂರು ಮಹಾನಗರ ಪಾಲಿಕೆ
- ತುಮಕೂರು – ಮುದ್ದುಕುಮಾರ್ ಅಡಿಷನಲ್ ಡೈರೆಕ್ಟರ್ ಇಂಡಸ್ಟ್ರಿ ಆ್ಯಂಡ್ ಕಾಮರ್ಸ್ ಡಿಪಾರ್ಟ್ಮೆಂಟ್
- ಯಾದಗಿರಿ – ಬಲವಂತ್ ಯೋಜನ ನಿರ್ದೇಶಕ , ಯಾದಗಿರಿ ಜಿಲ್ಲಾ ಪಂಚಾಯತ್
- ಬೆಂಗಳೂರು ಗ್ರಾಮಾಂತರ – ಸಿದ್ದಪ್ಪ ಹಿರಿಯ ಪಶು ವೈದ್ಯ ದೊಡ್ಡಬಳ್ಳಾಪುರ
- ಬೆಂಗಳೂರು ಗ್ರಾಮಾಂತರ ನರಸಿಂಹ ಮೂರ್ತಿ ಕೆ – ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಸರ್ವಿಸ್ ಕಮೀಷನರ್ ಹೆಬ್ಬಗೋಡಿ
- ಬೆಂಗಳೂರು ಸಿಟಿ – ಬಿವಿ ರಾಜ ಎಫ್ ಡಿ ಎ ಕೆಐ ಎ ಡಿಬಿ
- ಬೆಂಗಳೂರು ಸಿಟಿ – ರಮೇಶ್ ಕುಮಾರ್ ಜಂಟಿ ಆಯುಕ್ತ ವಾಣಿಜ್ಯ ತೆರಿಗೆ ಇಲಾಖೆ
- ಬೆಂಗಳೂರು ಸಿಟಿ- ಅಕ್ತರ್ ಅಲಿ – ಡೆಪ್ಯೂಟಿ ಕಂಟ್ರೋಲರ್ ಮಾಪನಾ ಇಲಾಖೆ
- ಶಿವಮೊಗ್ಗ – ಸಿ ನಾಗೇಶ್ – ಅಂತರಗಂಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಭದ್ರಾವತಿ
- ಶಿವಮೊಗ್ಗ ಪ್ರಕಾಶ್ – ಡೆಪ್ಯೂಟಿ ಡೈರೆಕ್ಟರ್ – ತೋಟಗಾರಿಕಾ ಇಲಾಖೆ
- ಬೆಂಗಳೂರು ಸಿಟಿ – ಚೇತನ್ ಕುಮಾರ್ – ಕಾರ್ಮಿಕಇಲಾಖೆ ಅಧಿಕಾರಿ ಮಂಡ್ಯ ವಿಭಾಗ
- ಬೆಂಗಳೂರು ಸಿಟಿ – ಮಂಜುನಾಥ್ ಟಿ ಆರ್ – ಎಫ್ ಡಿಎ ಬೆಂಗಳೂರು ನಾರ್ತ್ ಸಬ್ ಡಿವಿಷನ್ ಆಫೀಸರ್
ಇದನ್ನೂ ಓದಿ : ಏಷ್ಯಾಕಪ್ : ಇಂದು ಭಾರತ-ಪಾಕ್ ನಡುವೆ ಹೈವೋಲ್ಟೇಜ್ ಕದನ – ಪಂದ್ಯ ಎಷ್ಟು ಗಂಟೆಗೆ? ಉಚಿತವಾಗಿ ನೋಡುವುದೇಗೆ?
Post Views: 108