Download Our App

Follow us

Home » ಅಪರಾಧ » ಬಿಗ್ ಬಾಸ್ ಖ್ಯಾತಿಯ ಪ್ರಥಮ್​ಗೆ ಧಮ್ಕಿ ಹಾಕಿದ್ದ ದರ್ಶನ್​ ಫ್ಯಾನ್ಸ್​​​ – ಲಾಠಿ ರುಚಿ ತೋರಿಸಿದ ಪೊಲೀಸರು..!

ಬಿಗ್ ಬಾಸ್ ಖ್ಯಾತಿಯ ಪ್ರಥಮ್​ಗೆ ಧಮ್ಕಿ ಹಾಕಿದ್ದ ದರ್ಶನ್​ ಫ್ಯಾನ್ಸ್​​​ – ಲಾಠಿ ರುಚಿ ತೋರಿಸಿದ ಪೊಲೀಸರು..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇತ್ತ ವಿಕೃತವಾಗಿ ವರ್ತಿಸುತ್ತಿರುವ ದರ್ಶನ್​​ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಪ್ರಥಮ್​ಗೆ​ ಧಮ್ಕಿ ಹಾಕಿ, ಕೆಟ್ಟದಾಗಿ ಟ್ರೋಲ್ ಮಾಡ್ತಿದ್ದ ದರ್ಶನ್​ ಫ್ಯಾನ್ಸ್​​​​ಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ. ಸಿಂಧೂಧರ್ ಎಂಬ ವ್ಯಕ್ತಿ ಪ್ರಥಮ್​ರನ್ನು ಶೆಡ್​ಗೆ ಕೂಡ ಕರೆದಿದ್ದ.

ಈ ಬಗ್ಗೆ ಪ್ರಥಮ್​​ ಜುಲೈ 3ರಂದು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಾಗಾಗಿ ಸಿಂಧೂದರ್ ಎಂಬಾತನನ್ನು ಜ್ಞಾನಭಾರತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾಠಿ ರುಚಿ ತಿಂದ ಮೇಲೆ ದರ್ಶನ್​​​ ಫ್ಯಾನ್​​​​ ಸಿಂಧೂದರ್​​ ಪಾಠ ಕಲಿತಿದ್ದು, ವಿಡಿಯೋ ಮೂಲಕ ಸಿಂಧೂದರ್ ಪ್ರಥಮ್​ಗೆ ಕ್ಷಮೆ ಕೇಳಿದ್ದಾರೆ.

ಅನುಚಿತ ಪೋಸ್ಟ್​ ಹಾಕದಂತೆ ದರ್ಶನ್​​​​​ ಫ್ಯಾನ್ಸ್​ಗೆ ಪ್ರಥಮ್ ಸಾಕಷ್ಟು ಬಾರಿ ಮನವಿ ಮಾಡಿದ್ರೂ ವಿಕೃತ ಟೀಕೆ ಮುಂದುವರೆಸಿದ್ದರು. ದರ್ಶನ್ ಅಭಿಮಾನಿಗಳ ಕೆಟ್ಟ ವರ್ತನೆಗೆ ಬೇಸತ್ತು ಪ್ರಥಮ್​​​ ಪೊಲೀಸರ ಮೊರೆ ಹೋಗಿದ್ದರು. ಕಾನೂನು ಮೊರೆ ಹೋಗಿ ದರ್ಶನ್ ಫ್ಯಾನ್ಸ್ ವಿರುದ್ಧ ಪ್ರಥಮ್ ಸಮರ ಸಾರಿದ್ದರು. ಇದೀಗ ಪೊಲೀಸರು ದರ್ಶನ್​​​​​ನ ಮತ್ತಷ್ಟು ಫ್ಯಾನ್ಸ್​ಗಳನ್ನು ಹುಡುಕಿ ಲಾಠಿ ರುಚಿ ತೋರಿಸ್ತಿದ್ದಾರೆ.

ಇದನ್ನೂ ಓದಿ : ವಾಲ್ಮೀಕಿ ಹಗರಣ ಸಿಬಿಐ ತನಿಖೆಗೆ ಬಿಜೆಪಿ ಪಟ್ಟು – ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಬೃಹತ್ ಪ್ರೊಟೆಸ್ಟ್​..!

Leave a Comment

DG Ad

RELATED LATEST NEWS

Top Headlines

ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಪ್ರಶ್ನೆ ಇಲ್ಲವೇ ಇಲ್ಲ – ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ..!

ಬೆಂಗಳೂರು : ರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿರುವ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಸ್ಥಗಿತವಾಗುತ್ತದೆಯೇ ಎಂಬ ಸುದ್ದಿಗಳು ಹರಿದಾಡುತ್ತಿವೆ, ಇದರ ಬೆನ್ನಲ್ಲಿಯೇ ಸಿಎಂ ಸಿದ್ದರಾಮಯ್ಯ

Live Cricket

Add Your Heading Text Here