ಬೆಂಗಳೂರು : ವಾಲ್ಮೀಕಿ ನಿಗಮ ಹಗರಣದ ತನಿಖೆ ಚುರುಕುಗೊಂಡಿದೆ. ಈಗಾಗಲೇ ಮಾಜಿ ಸಚಿವ ನಾಗೇಂದ್ರರನ್ನ ED ಅಧಿಕಾರಿಗಳು ಬಂಧಿಸಿ ವಿಚಾರಣೆ ಮಾಡ್ತಿದ್ದಾರೆ. ಈ ಮಧ್ಯೆ ಶಾಸಕ ಬಸನಗೌಡ ದದ್ದಲ್ ಬಂಧನ ಭೀತಿಯಿಂದ ನಾಪತ್ತೆಯಾಗಿದ್ದರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ದದ್ದಲ್ ನಿನ್ನೆ ವಿಧಾನಸೌಧದಲ್ಲಿ ಪ್ರತ್ಯಕ್ಷರಾಗಿ ನಾನು ವಿಧಾನಸಭೆ ಕಲಾಪಕ್ಕೆ ಬಂದಿದ್ದೇನೆ, ನನಗೆ ಯಾವುದೇ ED ನೋಟೀಸ್ ಬಂದಿಲ್ಲಾ ಎಂದು ಹೇಳಿದ್ದರು.
ನಿನ್ನೆ ನನಗೆ ಯಾವ ನೋಟಿಸೂ ಬಂದಿಲ್ಲ ಎಂದಿದ್ದ ರಾಯಚೂರು MLA ಬಸನಗೌಡ ದದ್ದಲ್ಗೆ ಸೆಷನ್ ನಡೆಯೋ ಹೊತ್ತಲ್ಲೇ ಇಡಿ ನೋಟಿಸ್ ಕೊಟ್ಟು ಶಾಕ್ ನೀಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಪ್ರಕರಣದಲ್ಲಿ ನೋಟಿಸ್ ನೀಡಿರುವ ED ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೋಟಿಸ್ ನೀಡಿದೆ.
ಸದ್ಯ ನನ್ನ ಮುಟ್ಟಿಲ್ಲ ಅಂತಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ಗೆ ಸೆಷೆನ್ಸ್ ನಡೆಯುವಾಗಲೇ ED ವಿಚಾರಣೆಯ ಬಿಸಿ ಮುಟ್ಟಿಸಿದೆ. ನೋಟಿಸ್ ನೀಡಿದ ಹಿನ್ನಲೆ ಬಂಧನದ ಭೀತಿಯಲ್ಲಿ ED ವಿಚಾರಣೆಗೆ ದದ್ದಲ್ ಹಾಜರಾಗಲು ಸಿದ್ದತೆ ನಡೆಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ನಿಲ್ಲುತ್ತಿಲ್ಲ ಡೆಂಘೀ ಆರ್ಭಟ – ಕಳೆದ 24 ಗಂಟೆಯಲ್ಲಿ 435 ಕೇಸ್ ಪತ್ತೆ, 10 ಸಾವಿರ ಸನಿಹಕ್ಕೆ ಸೋಂಕಿತರ ಸಂಖ್ಯೆ..!