ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಡೆಂಘೀ ಕೇಸ್ಗಳು ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆ ಅವಧಿಯಲ್ಲಿ 435 ಡೆಂಘೀ ಕೇಸ್ಗಳು ವರದಿಯಾಗಿವೆ. ರಾಜಧಾನಿ ಬೆಂಗಳೂರು BBMP ವ್ಯಾಪ್ತಿಯಲ್ಲಿ 24 ಗಂಟೆಯಲ್ಲಿ 363 ಡೆಂಘೀ ಕೇಸ್ ಪತ್ತೆಯಾಗಿವೆ.
ರಾಜ್ಯದಲ್ಲಿ ಒಟ್ಟು 65 ಡೆಂಘೀ ಕೇಸ್ ಸಕ್ರಿಯವಾಗಿದ್ದು, ಡೆಂಘೀ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ನಿನ್ನೆ ಡೆಂಘೀ ಜ್ವರದಿಂದ ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು ಡೆಂಘೀ ಪ್ರಕರಣಗಳ ಸಂಖ್ಯೆ 9962ಕ್ಕೆ ಏರಿಕೆಯಾಗಿದ್ದು, ಈ ಮೂಲಕ 10 ಸಾವಿರ ಸನಿಹಕ್ಕೆ ಸೋಂಕಿತರ ಸಂಖ್ಯೆ ತಲುಪಿದೆ. ಇದುವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 3487 ಡೆಂಘೀ ಕೇಸ್ ಪತ್ತೆಯಾಗಿದೆ.
ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕೊರೋನಾ ಮಾದರಿಯಲ್ಲಿಯೇ ಡೆಂಘೀ ತಡೆಗೆ ಸರ್ಕಾರ ಕ್ರಮ ಕೈಗೊಂಡಿದೆ. ವಿಶೇಷ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಒಂದೇ ಕಡೆ ಎರಡು ಮೂರು ಕೇಸ್ಗಳು ಪತ್ತೆಯಾದರೆ ಹಾಟ್ ಸ್ಪಾಟ್ ಎಂದು ಗುರುತಿಸಲಾಗುತ್ತಿದೆ.. ಸದ್ಯ ಡೇಂಘಿ ಪೀಡಿತರಲ್ಲಿ 130 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಡೆಯುತ್ತಿದ್ದಾರೆ.
ಇದನ್ನೂ ಓದಿ : ವಾಲ್ಮೀಕಿ ನಿಗಮ ಹಗರಣದಲ್ಲಿ ಮತ್ತೊಂದು ಬೇಟೆ – 10 ಕೋಟಿ ಗುಳುಂ ಮಾಡಿದ್ದ ಶ್ರೀನಿವಾಸ್ ರಾವ್ ಅರೆಸ್ಟ್..!