ಬಾಗಲಕೋಟೆ : ಮೈ ಕೈ ನೋವಿಗೆ ಕೊಡಲಿ ಏಟು ಕೊಡ್ತಿದ್ದ ಪೂಜಾರಿಯನ್ನ ಬಂಧಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯ ಮುಧೋಳ ತಾಲೂಕಿನ ಮೆಟಗುಡ್ಡ ಗ್ರಾಮದಲ್ಲಿನ ಕಾಶಿಲಿಂಗೇಶ್ವರ ದೇವಸ್ಥಾನದ ಪೂಜಾರಿ ಜಕ್ಕಪ್ಪ ಗಡ್ಡದ ಭಕ್ತನೊಬ್ಬನ ಹೊಟ್ಟೆಗೆ ಕೊಡಲಿ ಏಟು ಕೊಟ್ಟ ಭಯಾನಕ ವೀಡಿಯೋ ವೈರಲ್ ಆಗಿದೆ.
ಪೂಜಾರಿ ಜಕ್ಕಪ್ಪ ಗಡ್ಡದ ಮೈ ಕೈ ನೋವು ಎಂದು ಬರುವ ಅಂದ ಭಕ್ತರಿಗೆ ಭಂಡಾರ ಹಚ್ಚಿ ಕೊಡಲಿ ಏಟು ಕೊಡುತ್ತ ಮೌಡ್ಯಾಚರಣೆಯಲ್ಲಿ ತೊಡಗಿದ್ದ. ಭಂಡಾರ ಹಚ್ಚಿ ಕೊಡಲಿ ಏಟು ನೀಡಿದ್ರೆ ಗಾಯವಾಸಿ ಆಗೋ ನಂಬಿಕೆಯಿದೆ. ಈ ಬಗ್ಗೆ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೌಢ್ಯ ನಿರ್ಬಂಧ ಕಾಯ್ದೆಯಡಿ ಪೂಜಾರಿ ಜಕ್ಕಪ್ಪ ಗಡ್ಡದ ವಿರುದ್ಧ FIR ದಾಖಲಾಗಿದ್ದು, ಲೋಕಾಪುರ ಠಾಣೆ ಪೊಲೀಸರು ಪೂಜಾರಿ ಜಕ್ಕಪ್ಪ ಗಡ್ಡದನನ್ನು ಬಂಧಿಸಿದ್ದಾರೆ. ಈ ಕುರಿತು ಬಾಗಲಕೋಟೆ ಎಸ್.ಪಿ ಅಮರನಾಥ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಚೊಚ್ಚಲ ಮಲಯಾಳಂ ಚಿತ್ರ ‘ಪಡಕ್ಕಳಂ’ಗೆ ಚಾಲನೆ ನೀಡಿದ ಕೆ.ಆರ್.ಜಿ ಸ್ಟೂಡಿಯೋಸ್..!