ಕನ್ನಡ ಸ್ಪಷ್ಟವಾಗಿ ಮಾತನಾಡುವ ಮತ್ತು ಸಾಹಿತ್ಯವನ್ನು ಬೆರೆಸಿಕೊಂಡು ನಿರೂಪಣೆ ಮಾಡುವ ನಿರೂಪಕಿ ಅಪರ್ಣಾ ವಿಧಿವಶರಾಗಿದ್ದಾರೆ. ಅದರಲ್ಲೂ ಮಜಾ ಟಾಕೀಸ್ ‘ವರು’ ಪಾತ್ರದಿಂದ ಜನರ ಅಪಾರ ಮೆಚ್ಚುಗೆ ಗಳಿಸಿದ್ದ ಇವರು ಕ್ಯಾನ್ಸರ್ ಎಂಬ ಮಾರಕಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿಗೆ ಅನೇಕರು ಕಂಬನಿ ಸುರಿಸಿದ್ದಾರೆ. ಅರ್ಪಣರನ್ನು ಮಜಾ ಟಾಕೀಸ್ ವೇದಿಕೆ ಮೂಲಕ ಹತ್ತಿರದದಲ್ಲಿ ಕಂಡ ನಟಿ ಶ್ವೇತಾ ಚೆಂಗಪ್ಪರವರು ಅಪರ್ಣಾರ ಬಗ್ಗೆ ಭಾವುಕ ಪೋಸ್ಟ್ ಬರೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಬರೆದುಕೊಂಡಿರುವ ಶ್ವೇತಾ ಚೆಂಗಪ್ಪರವರು, ಅಪರ್ಣಾ ಅಕ್ಕ RIP. ಬಹುಶಃ ನಿಮ್ಮನ್ನ ಅಕ್ಕ ಅಂತ ಕರೆದಷ್ಟು ನಾನು ಯಾರನ್ನೂ ಅಕ್ಕ ಅಂತ ಕರೆದಿಲ್ಲ ಎಂದು ಬರೆದುಕೊಂಡಿದ್ದಾರೆ.
ನಿಮ್ಮ ಜೊತೆ ಕಳೆದ ಪ್ರತಿ ಕ್ಷಣ ನಗುವಿನ ಅಲೆ. ಪ್ರತಿಯೊಂದು ನೆನಪು ನನ್ನ ಕೊನೆಯ ಉಸಿರಿನವರೆಗೂ ಶಾಶ್ವತವಾಗಿ ನನ್ನ ಜೊತೆ ಇರುತ್ತೆ. ತುಂಬಾ ಬೇಗ ಹೊರಟ್ ಬಿಟ್ರಿ. ಹೋಗಿ ಬನ್ನಿ ನಮ್ಮ ಪ್ರೀತಿಯ ಕನ್ನಡತಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಅನಂತ್ ಅಂಬಾನಿ ಹಲ್ದಿ ಶಾಸ್ತ್ರದಲ್ಲಿ ಪರಿಸರ ಕಾಳಜಿ ನೋಟ – ಸ್ಟೈಲಿಶ್ ಔಟ್ಫಿಟ್ನಲ್ಲಿ ಮಿಂಚಿದ ಜೋಡಿ..!