Download Our App

Follow us

Home » ಸಿನಿಮಾ » ಪ್ರೀತಿಯ ಮಡದಿ ಸಾವಿಗೆ ಅಪರ್ಣಾ ಪತಿ ಭಾವುಕ : ಹೇಳಿದ್ದೇನು?

ಪ್ರೀತಿಯ ಮಡದಿ ಸಾವಿಗೆ ಅಪರ್ಣಾ ಪತಿ ಭಾವುಕ : ಹೇಳಿದ್ದೇನು?

ಬೆಂಗಳೂರು : ಕನ್ನಡಿಗರ ಮನ ಗೆದ್ದಿದ್ದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರು ನಿನ್ನೆ ಚಿರನಿದ್ರೆಗೆ ಜಾರಿದ್ದಾರೆ. ಅಪರ್ಣಾ ಅವರ ನಿಧನ ಸುದ್ದಿ ರಾಜ್ಯಕ್ಕೆ ಅಘಾತ ತಂದಿದೆ. ಹಲವು ತಿಂಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಅವರು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ಕನ್ನಡ ಸಿನಿ ರಂಗದ ನಟರು ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.

ಇನ್ನೂ ಪ್ರೀತಿಯ ಮಡದಿ ನಿಧನದ ಬಗ್ಗೆ ಅಪರ್ಣಾ ಪತಿ ನಾಗರಾಜ್‌ ವಸ್ತಾರೆ ಮಾಹಿತಿ ನೀಡಿದ್ದಾರೆ. ಅಪರ್ಣಾ ಇನ್ನಿಲ್ಲ ಅನ್ನೋ ವಿಚಾರವನ್ನು ಬಹಳ ನೋವಿನಿಂದಲೇ ಹಂಚಿಕೊಂಡಿದ್ದಾರೆ. ಅಪರ್ಣಾ ಅವರು ಕಳೆದ ಎರಡು ವರುಷದಿಂದ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ನಾಲ್ಕನೇ ಸ್ಟೇಜ್ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದರು. ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ನಾವು ಸೋತಿದ್ದೇವೆ ಎಂದು ಅಪರ್ಣಾ ಅವರ ಪತಿ ಕಣ್ಣೀರಿಟ್ಟಿದ್ದಾರೆ.

ಅಂತೆಯೇ ಎಲ್ಲರ ಪ್ರೀತಿ, ಸಹಕಾರ ಒಡನಿರಲಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡುತ್ತೇವೆ ಎಂದು ಅಪರ್ಣಾ ಪತಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಗಣ್ಯರಿಂದ ಸಂತಾಪ..!

 

Leave a Comment

DG Ad

RELATED LATEST NEWS

Top Headlines

ನಾನೊಬ್ಬ ಸೆಲೆಬ್ರಿಟಿ.. ನನಗೆ ಗನ್ ಬೇಕೇ ಬೇಕು – ಪೊಲೀಸರ ಪತ್ರಕ್ಕೆ ಉತ್ತರ ಕೊಟ್ಟ ನಟ ದರ್ಶನ್!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್​ಗೆ ರೆಗ್ಯುಲರ್​ ಜಾಮೀನು ಸಿಕ್ಕಿ ಹೊರಗೆ ಬಂದಿದ್ದರೂ ಕೂಡಾ ಸಂಕಷ್ಟಗಳ ಸರಮಾಲೆ ಮುಗಿಯುತ್ತಲೇ ಇಲ್ಲ.

Live Cricket

Add Your Heading Text Here