ಬೆಳಗಾವಿಯಲ್ಲಿ ವರದಕ್ಷಿಣೆಗಾಗಿ ಪತ್ನಿ ಕೊಲೆ – ಬೆಡ್ ಕೆಳಗೆ ಶವ ಅಡಗಿಸಿಟ್ಟು ಪತಿ ಪರಾರಿ!

ಬೆಳಗಾವಿ : ಪತ್ನಿಯನ್ನು ಕೊಲೆ ಮಾಡಿ ಬೆಡ್ ಕೆಳಗೆ ಶವ ಅಡಗಿಸಿಟ್ಟ ಘಟನೆ ಬೆಳಗಾವಿಯ ಮೂಡಲಗಿಯ ಕಮಲದಿನ್ನಿಯಲ್ಲಿ ನಡೆದಿದೆ. ಸಾಕ್ಷಿ ಆಕಾಶ್ ಕಂಬಾರ (20) ಕೊಲೆಯಾದ ದುರ್ದೈವಿ.

ಮೂರು ದಿನಗಳ ಹಿಂದೆಯೇ ಪತ್ನಿಯನ್ನು ಕೊಲೆಗೈದು ಪತಿ ಆಕಾಶ್ ಕಂಬಾರ್ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಊರಿಗೆ ಹೋಗಿದ್ದ ಅತ್ತೆ ಮರಳಿ ಮನೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಈ ಜೋಡಿಗೆ ಮದುವೆ ಆಗಿತ್ತು. ಘಟನಾ ಸ್ಥಳಕ್ಕೆ ಮೂಡಲಗಿ ಪೊಲೀಸರ ಹಾಗೂ ಗೋಕಾಕ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾನೆ ಎಂದು ಮೃತ ಸಾಕ್ಷಿ ಕುಟುಂಬಸ್ಥರು ಆರೋಪ ಮಾಡಿದ್ದು, ಈ ಸಂಬಂಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಬಿಹಾರ ಚುನಾವಣೆ ಬಳಿಕ ಸಂಪುಟಕ್ಕೆ ಮೇಜರ್ ಸರ್ಜರಿಗೆ ಮುಂದಾದ ಸಿಎಂ – ಇಂದು ಸಂಪುಟ ಸದಸ್ಯರಿಗೆ ಡಿನ್ನರ್ ಪಾರ್ಟಿ!

Btv Kannada
Author: Btv Kannada

Read More