ಬೆಂಗಳೂರು : ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕೋಮುಗಲಭೆ ಸೃಷ್ಟಿಸೋ ರೀತಿ ಪೋಸ್ಟ್ ಮಾಡೋರು ಹೆಚ್ಚಾಗುತ್ತಿದ್ದು, ಇದೀಗ ಅಂತಹವರ ವಿರುದ್ಧ ಪೊಲೀಸ್ ಇಲಾಖೆ ಫುಲ್ ಅಲರ್ಟ್ ಆಗಿದ್ದು, ಪೊಲೀಸರು ಹದಿನೆಂಟು ಅಕೌಂಟ್ಗಳನ್ನ ಮಾರ್ಕ್ ಮಾಡಿ ಡಿಲೀಟ್ ಮಾಡಿಸಿದ್ದಾರೆ.
ದಕ್ಷಿಣ ವಿಭಾಗದ ಪೊಲೀಸರು ಕೋಮುಗಲಭೆ ಸಂಬಂಧ ಪೋಸ್ಟ್ ಮಾಡುವ ಪೇಜ್ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇತ್ತೀಚೆಗೆ ಕೆಲವರು ಸೋಶಿಯಲ್ ಮೀಡಿಯಾವನ್ನ ದುರ್ಬಳಕೆ ಮಾಡಿಕೊಳ್ತಿದ್ದು, ಅಪಪ್ರಚಾರ, ಪ್ರಚೋದನೆಗೆ ಸೋಶಿಯಲ್ ಮೀಡಿಯಾವನ್ನು ಬಳಸಿಕೊಳ್ತಿದ್ದಾರೆ. ಇನ್ನೂ ಕೆಲವರು ಧರ್ಮದ ವಿಚಾರಗಳಲ್ಲಿ ವಿಷ ಬಿತ್ತುವ ಕೆಲಸ ಮಾಡ್ತಿದ್ದಾರೆ.
ಕರ್ನಾಟಕದಲ್ಲಿ ಟ್ರೆಂಡ್ ಆಗುವಂತೆ ಕೋಮುಗಳ ಬಗ್ಗೆ, ಧರ್ಮಗಳನ್ನು ಗುರಿ ಇಟ್ಟುಕೊಂಡು ಪ್ರಚೋದನಕಾರಿ ಪೋಸ್ಟ್ ಹಾಕುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಈ ವೇಳೆ ಒಮನ್ ದೇಶ, ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಕುಳಿತು ಕರ್ನಾಟಕದಲ್ಲಿ ಕೋಮು ವಿವಾದಕ್ಕೆ ಪ್ರಚೋದನೆ ಆಗುವ ರೀತಿ ಪೋಸ್ಟ್ ಮಾಡ್ತಿರೋದು ಬೆಳಕಿಗೆ ಬಂದಿದೆ. ಇದೀಗ ಅಂತವರ ವಿರುದ್ಧ ಬೆಂಗಳೂರು ಪೊಲೀಸರು ಕ್ರಮ ಕೈಗೊಳ್ತಿದ್ದಾರೆ.
ಈವರೆಗೆ ದಕ್ಷಿಣ ವಿಭಾಗದ ಪೊಲೀಸರು 18 ಅಕೌಂಟ್ಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಒಮನ್ ದೇಶದಲ್ಲಿ ಕುಳಿತು ಕರ್ನಾಟಕದಲ್ಲಿ ಕೋಮು ವಿವಾದ ಸೃಷ್ಟಿಸುವ ರೀತಿ ಪೋಸ್ಟ್ ಹಾಕುವ ಪೇಜ್ಗಳನ್ನ ಪೊಲೀಸರು ಗುರುತಿಸಿ, ಸುಮೋಟೋ ಕೇಸ್ ದಾಖಲಿಸಿ ಕ್ರಮ ಕೈಗೊಳ್ತಿದ್ದಾರೆ.
ಇದನ್ನೂ ಓದಿ : ನಟಿ ರಮ್ಯಾಗೆ ಅಶ್ಲೀಲ ಕಮೆಂಟ್ – 11 ಮಂದಿ ದರ್ಶನ್ ಫ್ಯಾನ್ಸ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ!







