ವಿಜಯನಗರ : ಕ್ಷುಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ವರದಾಪುರ ಹೊರವಲಯದಲ್ಲಿ ನಡೆದಿದೆ. ಹುಳ್ಳಿ ರಮೇಶ್( 32) ಕೊಲೆ ಮಾಡಿದ ಆರೋಪಿ.
ಹಗರಿಬೊಮ್ಮನಹಳ್ಳಿ ತಾಲೂಕಿನ ವರದಾಪುರ ಹೊರವಲಯದಲ್ಲಿ ದನ ಕಾಯೋ ವಿಚಾರಕ್ಕೆ ಹುಳ್ಳಿ ಚೆನ್ನಪ್ಪ ಹಾಗೂ ಹುಳ್ಳಿ ರಮೇಶ್ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.ಕೈ ಕೈ ಮಿಲಾಸುವರೆಗೂ ಹೋಗಿ ಕೊನೆಗೆ ಹುಳ್ಳಿ ಚೆನ್ನಪ್ಪನನ್ನ ರಮೇಶ್ ಕೊಲೆ ಮಾಡಿದ್ದಾನೆ.
ಈ ಸಂಬಂಧ ಘಟನಾ ಸ್ಥಳಕ್ಕೆ ಮರಿಯಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಹುಳ್ಳಿ ರಮೇಶ್ಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ : ಶಾಸಕ ಭರತ್ ಶೆಟ್ಟಿ ವಿರುದ್ಧ FIR..!
Post Views: 161