ಜಾತಿ ಗಣತಿಗೆ ನಾಳೆಯೇ ಡೆಡ್​ಲೈನ್​​ – ಬೆಂಗಳೂರಲ್ಲಿ ನಿನ್ನೆ ಒಂದೇ ದಿನ 95,024 ಮನೆ ಸಮೀಕ್ಷೆ!

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಸಾಮಾಜಿಕ, ಆರ್ಥಿಕ ಸಮೀಕ್ಷೆ ಬಿರುಸಿನಿಂದ ಸಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಒಂದೇ ದಿನ 95,024 ಮನೆ ಸಮೀಕ್ಷೆ ಮಾಡಲಾಗಿದ್ದು, ಒಟ್ಟು 1,19,477 ಮನೆಗಳ ಸಮೀಕ್ಷೆ ನಡೆಸಲಾಗಿದೆ.

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 14,288 ಮನೆಗಳ ಸಮೀಕ್ಷೆ ನಡೆಸಲಾಯಿತು. ಇನ್ನು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ 17,269, ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 31,363, ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ 16,445 ಹಾಗೂ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ 40,112 ಮನೆಗಳ ಸಮೀಕ್ಷೆ ನಡೆಸಲಾಗಿಯಿತು. ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 1,19,477 ಮನೆಗಳ ಸಮೀಕ್ಷೆ ನಡೆಸಲಾಗಿದೆ.

ರಾಜ್ಯದಲ್ಲಿ ಜಾತಿ ಗಣತಿ ಶುರುವಾಗಿ ಇಂದಿಗೆ 15ನೇ ದಿನವಾಗಿದ್ದು, ಗಣತಿಗೆ ನೀಡಿದ್ದ ಡೆಡ್​ಲೈನ್ ಮಂಗಳವಾರ ಅಂತ್ಯವಾಗುತ್ತಿದೆ. ಅಕ್ಟೋಬರ್​ 7ಕ್ಕೆ ಈ ಸಮೀಕ್ಷೆ ಮುಗಿಸುವಂತೆ ಗಡುವು ನೀಡಲಾಗಿತ್ತು. ಹಾಗಾಗಿ ಜಾತಿ ಗಣತಿ ಸಮೀಕ್ಷೆ ನಾಳೆಯೇ ಅಂತ್ಯವಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.

ಅಕ್ಟೋಬರ್ 4ರವರೆಗೆ ರಾಜ್ಯದಲ್ಲಿ ಒಟ್ಟು 1,2,83,172 ಮನೆಗಳ ಸಮೀಕ್ಷೆ ನಡೆಸಲಾಗಿದ್ದು, ಇನ್ನು 40,94,806 ಮನೆಗಳ ಸಮೀಕ್ಷೆ ನಡೆಸಬೇಕಾಗಿದೆ. ಸದ್ಯದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಶೇಕಡಾ 65 ರಷ್ಟು ಸಮೀಕ್ಷಾ ಗುರಿ ಪೂರ್ಣವಾಗಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ ಭಾರೀ ಮಳೆಗೆ ಧರೆಗುರುಳಿದ ಬೃಹತ್ ಮರ – 2 ಕಾರು, 3 ಬೈಕ್​​ ಜಖಂ!

Btv Kannada
Author: Btv Kannada

Read More