Download Our App

Follow us

Home » ಜಿಲ್ಲೆ » ಹಾವೇರಿಯಲ್ಲಿ ಡೇಂಜರ್​ ಡೆಂಘೀಗೆ 14 ವರ್ಷದ ಬಾಲಕ ಬಲಿ..!

ಹಾವೇರಿಯಲ್ಲಿ ಡೇಂಜರ್​ ಡೆಂಘೀಗೆ 14 ವರ್ಷದ ಬಾಲಕ ಬಲಿ..!

ಹಾವೇರಿ : ರಾಜ್ಯದಲ್ಲಿ ಮಳೆ ಅಬ್ಬರ ಜೊತೆಗೆ ಡೆಂಘೀ ಸೋಂಕಿತರ ಸಂಖ್ಯೆಯೂ ಮಿತಿ ಮೀರಿ ಹೆಚ್ಚಳವಾಗುತ್ತಿದೆ. ಇದೀಗ ಡೆಂಘೀ ಸೋಂಕಿಗೆ 14 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಹಾವೇರಿಯಲ್ಲಿ ನಡೆದಿದೆ. ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ 14 ವರ್ಷದ ಧನು ಮೃತಪಟ್ಟ ಬಾಲಕ.

ಒಂದು ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಮೃತ ಬಾಲಕ ಧನುನನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜ್ವರದ ಪ್ರಮಾಣ ಹೆಚ್ಚಳವಾಗಿ ಬಾಲಕ ಮೃತಪಟ್ಟಿದ್ದಾನೆ ಇನ್ನು ಬಾಲಕನ ಸಾವಿನಿಂದ ಗ್ರಾಮದ ಜನರಲ್ಲಿ ತೀವ್ರ ಆತಂಕ ಸೃಷ್ಠಯಾಗಿದೆ.

ರಾಜ್ಯದಲ್ಲಿ ಏರಿಕೆ ಆಗ್ತಲೇ ಇವೆ ಡೆಂಢೀ ಕೇಸ್ :  ರಾಜ್ಯದಲ್ಲಿ ಇದುವರೆಗೆ 53,866 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 7006 ಮಂದಿಯಲ್ಲಿ ರೋಗ ದೃಢಪಟ್ಟಿದೆ. 352 ಸಕ್ರಿಯ ಪ್ರಕರಣಗಳಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ರಾಜ್ಯದಲ್ಲಿ 2432 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದವು. ಯಾವುದೇ ಸಾವು ಸಂಭವಿಸಿರಲಿಲ್ಲ. ಆದ್ರೆ ಈ ಬಾರಿ 8 ಮಂದಿ ಡೆಂಘೀಗೆ ಬಲಿಯಾಗಿದ್ದಾರೆ.

ಬೆಂಗಳೂರು – 1908
ಚಿಕ್ಕಮಗಳೂರು – 521
ಮೈಸೂರು – 496
ಹಾವೇರಿ – 481
ಶಿವಮೊಗ್ಗ – 292
ಧಾರವಾಡ – 289
ಚಿತ್ರದುರ್ಗ – 275
ದಕ್ಷಿಣ ಕನ್ನಡ – 263
ಹಾಸನ – 221
ಮಂಡ್ಯ – 215

ಇದನ್ನೂ ಓದಿ : ಗದಗ : ರೆಡ್ ಹ್ಯಾಂಡ್ ಆಗಿ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here