Download Our App

Follow us

Home » ರಾಜ್ಯ » ರಾಜ್ಯದಲ್ಲಿ ಡೆಡ್ಲಿ ಡೆಂಘೀ ರಣಾರ್ಭಟ – 7000 ಸಾವಿರ ಗಡಿ ದಾಟಿದ ಕೇಸ್​​..!

ರಾಜ್ಯದಲ್ಲಿ ಡೆಡ್ಲಿ ಡೆಂಘೀ ರಣಾರ್ಭಟ – 7000 ಸಾವಿರ ಗಡಿ ದಾಟಿದ ಕೇಸ್​​..!

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಕೇಸ್ ಹೆಚ್ಚಾಗುತ್ತಲೇ ಇದೆ. ಇದೀಗ ರಾಜ್ಯದಲ್ಲಿ ಡೆಂಗ್ಯೂ ಕೇಸ್ 7000 ಸಾವಿರದ ಗಡಿ ದಾಟಿದೆ. 352 ಡೆಂಗ್ಯೂ ಕೇಸ್​​ನಲ್ಲಿ ಇಲ್ಲಿಯವರೆಗೆ 6 ಮಂದಿ ಬಲಿಯಾಗಿದ್ದು, ಕಳೆದ 24 ಗಂಟೆಯಲ್ಲಿ 175 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದೆ.

ಕಳೆದ 24 ಗಂಟೆಯಲ್ಲಿ ಒಂದು ವರ್ಷದೊಳಗಿನ 1 ಮಗುವಿಗೆ ಡೆಂಗ್ಯೂ ಪತ್ತೆಯಾಗಿದ್ದು, ಇಲ್ಲಿಯವರೆಗೂ ಒಂದು ವರ್ಷದೊಳಗಿನ 132 ಮಕ್ಕಳಲ್ಲಿ ಡೆಂಗ್ಯೂ ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ 1 ವರ್ಷದಿಂದ 18 ವರ್ಷದೊಳಗಿನ 53 ಮಂದಿಯಲ್ಲಿ ಡೆಂಗ್ಯೂ ಕಾಣಿಸಿಕೊಂಡಿದ್ದು, ಇಲ್ಲಿಯವರೆಗೂ 1 ವರ್ಷದಿಂದ 18 ವರ್ಷದೊಳಗಿನ 2448 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 18 ವರ್ಷ ಮೇಲ್ಪಟ್ಟ 121 ಜನರಲ್ಲಿ  ಡೆಂಗ್ಯೂ ಪತ್ತೆಯಾಗಿದ್ದು, ಇಲ್ಲಿಯವರೆಗೂ 18ವರ್ಷ ಮೇಲ್ಪಟ್ಟ 4426 ಮಂದಿಗೆ ಡೆಂಗ್ಯೂ ದೃಢಪಟ್ಟಿದೆ.

ಡೆಡ್ಲಿ ಡೆಂಗ್ಯೂ ರಣಾರ್ಭಟದಿಂದ ಮೆಡಿಕಲ್​​ ಎಮರ್ಜೆನ್ಸಿ ಶುರುವಾಯ್ತು. ರಾಜ್ಯದ ಅನೇಕ ಆಸ್ಪತ್ರೆಗಳಲ್ಲಿ ಔಷಧಿಗಳು ಖಾಲಿಯಾಗಿದ್ದು, ಡೆಂಗ್ಯೂ ಅಬ್ಬರದ ಮಧ್ಯೆ 500 mg ಪ್ಯಾರಸಿಟಮಲ್ ಮಾತ್ರೆಗಳಿಗೂ ಬರ ಬಂದಿದೆ. KSMSCL ಪ್ಯಾರಸಿಟಮ್ 650 mg ಸ್ಟಾಕ್ ಇಟ್ಟುಕೊಂಡಿದ್ದು, ಪ್ಯಾರಸಿಟಮ್ 650 mg ಮಕ್ಕಳಿಗೆ ನೀಡಿದ್ರೆ ಹೈಡೋಸ್ ಆಗೋ ಸಾಧ್ಯತೆಯಿದೆ. ವಾತಾವರಣ ಬದಲಾವಣೆಯಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಪೋಷಕರು 650mg ಪ್ಯಾರಸಿಟಮಲ್ ಮಾತ್ರೆ ನೀಡಲು ಆತಂಕಗೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಪತಿ ದರ್ಶನ್​ಗಾಗಿ ಶಕ್ತಿ ದೇವತೆ ಬಂಡೆ ಮಹಾಕಾಳಿಯ ಮೊರೆ ಹೋದ ವಿಜಯಲಕ್ಷ್ಮಿ..!

Leave a Comment

DG Ad

RELATED LATEST NEWS

Top Headlines

ಬಿಎಂಟಿಸಿ ಬಸ್‌ನಲ್ಲಿ ಕುಳಿತ್ತಿದ್ದ ಕಂಡಕ್ಟರ್‌ ತಲೆಗೆ ಕಲ್ಲಿಂದ ಹೊಡೆದ ಪ್ರಯಾಣಿಕ..!

ಬೆಂಗಳೂರು : ಬಿಎಂಟಿಸಿ ಕಂಡಕ್ಟರ್, ಡ್ರೈವರ್​​ಗಳ ಮೇಲೆ ಪದೇ-ಪದೇ ಹಲ್ಲೆ ಆಗ್ತಲೇ ಇವೆ. ಕಳೆದ ತಿಂಗಳು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣಿಕನೊಬ್ಬ ಕಂಡಕ್ಟರ್​​ಗೆ ಚಾಕುವಿನಿಂದ

Live Cricket

Add Your Heading Text Here