ತುಮಕೂರು : Sprite ಕೂಲ್ ಡ್ರಿಂಕ್ನಲ್ಲಿ ಜೇಡ ರೂಪದ ಹುಳ ಪತ್ತೆಯಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಹುಳು ಕಾಣಿಸುತ್ತಿದ್ದಂತೆ ಕೂಲ್ ಡ್ರಿಂಕ್ಸ್ ಪ್ರಿಯರು ಶಾಕ್ ಆಗಿದ್ದಾರೆ. ತುಮಕೂರಿನ ಭಾರತಿ ಟೀ ಶಾಪ್ನಲ್ಲಿ ಖರೀದಿಸಿದ್ದ ಕೋಕಾ ಕೋಲಾ ಕಂಪನಿ ಪ್ರಾಡಕ್ಟ್ ಸ್ಪ್ರೈಟ್ ಕೂಲ್ ಡ್ರಿಂಕ್ನಲ್ಲಿ ಹುಳು ಪತ್ತೆಯಾಗಿದೆ.
ಗ್ರಾಹಕ ರಕ್ಷಿತ್ ಎಂಬಾತ ಸ್ಪ್ರೈಟ್ ಬಾಟೆಲ್ ಖರೀದಿ ಮಾಡಿದ್ದ, ಹುಳು ಪತ್ತೆಯಾಗಿರುವ ಹಿನ್ನಲೆ ರಕ್ಷಿತ್ ಆಹಾರ ಸುರಕ್ಷತಾ ಇಲಾಖೆಗೆ ದೂರು ನೀಡಿದ್ದಾರೆ. ಆಹಾರ ಸುರಕ್ಷತಾ ಅಧಿಕಾರಿಗಳು ಟೀ ಶಾಪ್ನ್ನು ಪರಿಶೀಲನೆ ಮಾಡಿ, ಸ್ಪ್ರೈಟ್ ಬಾಟಲ್ ವಶಕ್ಕೆ ಪಡೆದು ಪರೀಕ್ಷೆಗೆ ಕಳಿಸಿದ್ದಾರೆ. ಅಂಗಡಿ ಮಾಲೀಕ ಹಾಗೂ ವಿತರಕ ಕಂಪನಿ ವಿರುದ್ದ ದೂರು ನೀಡಿದ್ದಾರೆ.
ಇದನ್ನೂ ಓದಿ : ದರ್ಶನ್ಗೆ ಹಣ ನೀಡಿದ್ದ BBMP ಮಾಜಿ ಉಪ ಮೇಯರ್ ಮೋಹನ್ ರಾಜ್ಗೆ ಮತ್ತೆ ನೋಟಿಸ್ ಜಾರಿ..!
Post Views: 124