Download Our App

Follow us

Home » ಸಿನಿಮಾ » ಅಂಕಿತಾ ಜಯರಾಮ್​, ಆದಿತ್ಯ ನಟನೆಯ ‘ಕಾಗದ’ ಚಿತ್ರ ರಾಜ್ಯಾದ್ಯಂತ ರಿಲೀಸ್​ : ಪ್ರೇಕ್ಷಕರು ಫಿದಾ..!

ಅಂಕಿತಾ ಜಯರಾಮ್​, ಆದಿತ್ಯ ನಟನೆಯ ‘ಕಾಗದ’ ಚಿತ್ರ ರಾಜ್ಯಾದ್ಯಂತ ರಿಲೀಸ್​ : ಪ್ರೇಕ್ಷಕರು ಫಿದಾ..!

ಅರುಣ್ ಕುಮಾರ್ ಆಂಜನೇಯ ಅವರ ನಿರ್ಮಾಣದಲ್ಲಿ ರಂಜಿತ್ ಅವರು ನಿರ್ದೇಶಿಸಿರುವ “ಕಾಗದ” ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಸಿನಿ ಪ್ರಿಯರು ಚಿತ್ರವನ್ನು ಮೆಚ್ಚಿಕೊಂಡಿದ್ದು, ಚಿತ್ರ ಮಂದಿರಗಳಲ್ಲಿ ಹೌಸ್​​ಪುಲ್​ ಪ್ರದರ್ಶನ ಕಾಣುತ್ತಿದೆ.

ಮೊಬೈಲ್ ಬರುವುದಕ್ಕೂ ಮುನ್ನ ಜನರು ಕಾಗದ ಬರೆಯುತ್ತಿದ್ದರು. ಆ ಕಾಲದ ಪ್ರೇಮಕಥೆ ‘ಕಾಗದ’ ಸಿನಿಮಾದಲ್ಲಿದ್ದು, 2005ರ ಸಂದರ್ಭದ ಕಹಾನಿಯೂ ಈ ಸಿನಿಮಾದಲ್ಲಿದೆ. ನಿರ್ಮಾಪಕ ಅರುಣ್ ಕುಮಾರ್ ಅವರು ಪುತ್ರ, ಹೊಸ ನಟ ಆದಿತ್ಯ ಅವರು ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಬಾಲನಟಿಯಾಗಿ ಗುರುತಿಸಿಕೊಂಡ ಅಂಕಿತಾ ಜಯರಾಂ ಅವರು ‘ಕಾಗದ’ ಸಿನಿಮಾಗೆ ನಾಯಕಿ ಆಗಿದ್ದಾರೆ.

ಸ್ಯಾಂಡಲ್‌ವುಡ್‌ನ ಹಲವು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಗುರುತಿಸಿಕೊಂಡ ಪ್ರತಿಭೆ ಅಂಕಿತಾ ಜಯರಾಮ್, ಇದೀಗ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. “ಕಾದಗ” ಚಿತ್ರದಲ್ಲಿ ಅಂಕಿತಾ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕನ್ನಡದ ಜನಪ್ರಿಯ ಧಾರಾವಾಹಿ ‘ಭೂಮಿಗೆ ಬಂದ ಭಗವಂತ’ದಲ್ಲೂ ಅಂಕಿತಾ ಜಯರಾಮ್​ ನಟಿಸಿ ಸೈ ಅನಿಸಿಕೊಂಡಿದ್ದರು.

ಕಾಗದ ಸಿನಿಮಾದಲ್ಲಿ ನಾಯಕ ಆದಿತ್ಯ ಹಾಗೂ ನಾಯಕಿ ಅಂಕಿತಾ ಜೊತೆ ನಟಿ ನೇಹಾ ಪಾಟೀಲ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಬಲ ರಾಜ್ವಾಡಿ, ಮಠ ಕೊಪ್ಪಳ, ನೀನಾಸಂ ಅಶ್ವತ್ಥ್​, ಶಿವಮಂಜು ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ 4 ಹಾಡುಗಳಿದ್ದು, ಪ್ರದೀಪ್ ವರ್ಮಾ ಸಂಗೀತ ನಿರ್ದೇಶನ ಮಾಡಿದ್ದಾರೆ. ವೀನಸ್ ನಾಗರಾಜ್ ಮೂರ್ತಿ ಅವರ ಛಾಯಾಗ್ರಹಣ ಈ ಸಿನಿಮಾದಲ್ಲಿ ಅದ್ಬುತವಾಗಿ ಮೂಡಿ ಬಂದಿದೆ. ಪವನ್ ಗೌಡ ಅವರು ಸಂಕಲನದ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಈ ಹಿಂದೆ ‘ಕಾಗದ’ ಸಿನಿಮಾದ ಟ್ರೇಲರ್ ನೋಡಿದ ರಮೇಶ್ ಅರವಿಂದ್, ಧ್ರುವ ಸರ್ಜಾ, ಅನು ಪ್ರಭಾಕರ್, ಎ.ಪಿ. ಅರ್ಜುನ್ ಮುಂತಾದವರು ಮೆಚ್ಚುಗೆ ಸೂಚಿಸಿದ್ದರು. ಜಂಕಾರ್ ಮ್ಯೂಸಿಕ್​ನಲ್ಲಿ ಈ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆ ಆಗಿವೆ. “ಕಾಗದ” ನಿರ್ಮಾಪಕ ಅರುಣ್​ ಕುಮಾರ್​ ಅವರು ಈ ಮೊದಲು ‘ರಗಡ್​’ ಸಿನಿಮಾ ನಿರ್ಮಿಸಿದ್ದರು. ಈಗ ಮಗನಿಗಾಗಿ ‘ಕಾಗದ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಯಾವುದೇ ಧರ್ಮದ ಭಾವನೆಗಳಿಗ ಧಕ್ಕೆ ಉಂಟುಮಾಡುವ ದೃಶ್ಯಗಳನ್ನು ತೋರಿಸದೆ ಮನುಷ್ಯತ್ವವೇ ಎಲ್ಲಕ್ಕಿಂತ ಮುಖ್ಯ ಎನ್ನುವ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ : IPS ಬೆನ್ನಲ್ಲೇ IASಗೆ ಮೇಜರ್​​ ಸರ್ಜರಿ – 21 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ..!

Leave a Comment

DG Ad

RELATED LATEST NEWS

Top Headlines

ಕೆನಡಾ ಪ್ರಧಾನಿ ಸ್ಥಾನಕ್ಕೆ ಜಸ್ಟಿನ್ ಟ್ರುಡೊ ರಾಜೀನಾಮೆ..!

ಒಟ್ಟಾವೊ : ಆಂತರಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 2013ರಿಂದ ಕೆನಡಾದ ಲಿಬರಲ್‌ ಪಕ್ಷದ ನಾಯಕ

Live Cricket

Add Your Heading Text Here