ಬೆಂಗಳೂರು : ದರ್ಶನ್ ಅವರನ್ನು ತನ್ನ ದೊಡ್ಡ ಮಗ ಎಂದೇ ಕರೆಯುತ್ತಿದ್ದ ಸುಮಲತಾ ಅವರು ಕೊನೆಗೂ ಮೌನ ಮುರಿದಿದ್ದಾರೆ. ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ. ನಾನು ಜವಾಬ್ದಾರಿಯುತ ವ್ಯಕ್ತಿಯಾಗಿ ಬೇಜವಾಬ್ದಾರಿ ಹೇಳಿಕೆ ನೀಡಲಾಗದು, ರೇಣುಕಾಸ್ವಾಮಿಯನ್ನು ಆ ಕುಟುಂಬ ಹೃದಯವಿದ್ರಾವಕವಾಗಿ ಕಳೆದುಕೊಂಡಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ಮೊದಲು ನನ್ನ ಸಾಂತ್ವನ ಹೇಳುವೆ, ಕಾನೂನು ರೀತಿ ಅವರಿಗೆ ಸಿಗಬೇಕಾದ ನ್ಯಾಯ ಸಿಗಲೇಬೇಕು. ಆ ಘಟನೆಯು ನನ್ನ ಹೃದಯವನ್ನು ಛಿದ್ರಗೊಳಿಸಿದೆ ಎಂದು ಬರೆದಿದ್ದಾರೆ.
ನಾನು ಅದನ್ನು ಅರ್ಥ ಮಾಡಿಕೊಳ್ಳಲು ಆಗದೇ ಹಲವು ದಿನ ಆಘಾತದಲ್ಲಿದ್ದೆ, ನನ್ನ ಮೌಲ್ಯದ ಬಗ್ಗೆ ಕೆಲವರು ಕಮೆಂಟ್ ಮಾಡಿದ್ದಾರೆ. ಕೋರ್ಟ್ನಲ್ಲಿ ದರ್ಶನ್ ಪ್ರಕರಣ ಇರೋದ್ರಿಂದ ನಾನು ಏನೂ ಹೇಳಲ್ಲ. ತನಿಖೆ ಆಗ್ತಿದೆ, ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ, ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಅಪಾರ ನಂಬಿಕೆ ಇದೆ. ಇದು ಯಾವುದೋ ಸಿನಿಮಾ ಅಥವಾ ರಾಜಕೀಯ ಘಟನೆಯಲ್ಲ, ದರ್ಶನ್ ಆರೋಪಿಯಾಗಿ ನಿಂತಿರುವುದನ್ನು ನೋಡುವುದು ನನಗೆ ನೋವು ತಂದಿದೆ ಎಂದು ಸುಮಲತಾ ಪತ್ರದಲ್ಲಿ ಬರೆದಿದ್ದಾರೆ.
ದರ್ಶನ್ ನನಗೆ ಯಾವತ್ತೂ ಹಿರಿಯ ಮಗನೇ, ಇಂಥಾ ಕೃತ್ಯ ಎಸೆಯೋ ನನ್ನ ಮಗನಲ್ಲ. ತಾಯಿಯಾಗಿ ನಾನು ಸತ್ಯ ಹೊರಬರಲಿ ಎಂದು ಬಯಸುತ್ತೇನೆ, ಎಲ್ಲರಿಗೂ ನ್ಯಾಯ ಸಿಗಲಿ ಎಂದಷ್ಟೇ ಆಶಿಸುತ್ತೇನೆ. ಕಾನೂನಿಗಿಂತಲೂ ಇಲ್ಲಿ ಯಾರೂ ದೊಡ್ಡವರಲ್ಲ, ಕಾನೂನನ್ನು ಗೌರವಿಸಬೇಕು, ತಾಳ್ಮೆಯಿಂದ ಕಾಯಬೇಕು ಎಂದು ರಿಯಾಕ್ಟ್ ಮಾಡಿದ್ದಾರೆ.
ಇದನ್ನೂ ಓದಿ : ‘ಭೈರವನ ಕೊನೆ ಪಾಠ’ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ – ಶಿವಣ್ಣಗೆ ಹೇಮಂತ್ ರಾವ್ ಆ್ಯಕ್ಷನ್ ಕಟ್..!