ನವದೆಹಲಿ : ಇಂದು ರಾಜ್ಯಸಭೆಯಲ್ಲೂ ಪ್ರಧಾನಿ ಮೋದಿ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಹು ದಶಕಗಳ ಬಳಿಕ ಒಂದೇ ಸರ್ಕಾರಕ್ಕೆ ಮೂರನೇ ಬಾರಿಗೆ ಅವಕಾಶ ನೀಡಲಾಗಿದೆ. 10 ವರ್ಷಗಳ ಬಳಿಕ ಮತ್ತೆ ಅಧಿಕಾರದ ಬರುವುದು ಸಾಮಾನ್ಯವಲ್ಲ ಎಂದರು. ಅಂಬೇಡ್ಕರ್ ಸಂವಿಧಾನದ ಪರಿಣಾಮ ನಾವು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಮತ್ತೆ ಗೆದ್ದು ಬರಲು ಸಾಧ್ಯವಾಗಿದೆ. ಸಂವಿಧಾನ ಕೇವಲ ಪುಸ್ತಕವಲ್ಲ, ಸ್ಫೂರ್ತಿಯ ಸಂಕೇತವಾಗಿದೆ. ಸಂವಿಧಾನ ನಮಗೆ ಮಾರ್ಗದರ್ಶನ ನೀಡುತ್ತದೆ. ಕೆಲವರು ಸಂವಿಧಾನ ಪುಸ್ತಕ ಹಿಡಿದು ಮಾತ್ರ ತಿರುಗುತ್ತಾರೆ ಎಂದು ವಿಪಕ್ಷಕ್ಕೆ ಟಾಂಗ್ ಕೊಟ್ಟರು.
ಇದೇ ವೇಳೆ ಪ್ರಧಾನಿ ಮೋದಿ ಮಾತನಾಡಿ, ಭ್ರಷ್ಟಾಚಾರ ಮಟ್ಟ ಹಾಕಲೆಂದೇ ಬಂದಿದ್ದೇನೆ, ಭ್ರಷ್ಟಾಚಾರಿಗಳು ಯಾರೇ ಆದ್ರೂ ಸುಮ್ಮನೆ ಬಿಡಲ್ಲ. ಅದಕ್ಕಾಗಿಯೇ ತನಿಖಾ ಸಂಸ್ಥೆಗಳಿಗೆ ಸ್ವತಂತ್ರ ನೀಡಿದ್ದೇನೆ, ಭ್ರಷ್ಟಾಚಾರ ವಿರುದ್ಧದ ಸಮರಕ್ಕೆ ನಾನು ಅಡ್ಡಿ ಮಾಡೋದಿಲ್ಲ ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ.
ಭ್ರಷ್ಟಾಚಾರದ ವಿಚಾರದಲ್ಲಿ ನನ್ನ ನಿರ್ಧಾರ ಬದಲಾಗೋದಿಲ್ಲ, ಕೇರಳದಲ್ಲಿ ಸಿಎಂ ಫ್ಯಾಮಿಲಿ ವಿರುದ್ಧ ತನಿಖೆ ಮಾಡಿ ಅಂತಾರೆ. CBI, ED ಮೂಲಕ ತನಿಖೆ ಮಾಡಿಸಿ ಅಂತಾ ಇವರೇ ಕೇಳಿದ್ರು, ದೆಹಲಿಯಲ್ಲಿ ಇದೇ ED, CBI ತನಿಖೆ ಮಾಡಿದ್ರೆ ವಿರೋಧ ಮಾಡ್ತಾರೆ. ಕಾಂಗ್ರೆಸ್ನವರು ಭ್ರಷ್ಟಾಚಾರಿಗಳನ್ನು ಬೆಂಬಲಿಸಿದ್ದಾರೆ, ನಾವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿಲ್ಲ. ಕಾಂಗ್ರೆಸ್ ಕಾಲದಲ್ಲಿ CBI ದುರುಪಯೋಗದ ಬಗ್ಗೆ ಮುಲಾಯಂ ಹೇಳಿದ್ರು ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಅಬ್ಬರಿಸಿದ್ದಾರೆ.
ಇದನ್ನೂ ಓದಿ : ಮಂಗಳೂರಿನಲ್ಲಿ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ : ಓರ್ವನ ರಕ್ಷಣೆ, ಮತ್ತೋರ್ವನಿಗಾಗಿ ಮುಂದುವರೆದ ಶೋಧ..!