Download Our App

Follow us

Home » ಅಪರಾಧ » ರಾಮನ ಹಾಡಿಗೆ ಡ್ಯಾನ್ಸ್​​ ಮಾಡಿದ್ದ ಯುವಕನ ಮೇಲೆ ಹಲ್ಲೆ – ಕೇಸ್​​​ ದಾಖಲು..!

ರಾಮನ ಹಾಡಿಗೆ ಡ್ಯಾನ್ಸ್​​ ಮಾಡಿದ್ದ ಯುವಕನ ಮೇಲೆ ಹಲ್ಲೆ – ಕೇಸ್​​​ ದಾಖಲು..!

ಕಲಬುರಗಿ : ರಾಮನ ಹಾಡಿಗೆ ಡ್ಯಾನ್ಸ್​​ ಮಾಡಿದ್ದ ಯುವಕನ ಮೇಲೆ ಅನ್ಯ ಕೋಮಿನ ಐದಾರು ಮಂದಿ ಹಲ್ಲೆ ಮಾಡಿರುವ ಘಟನೆ ಕಲಬುರಗಿಯ ಇಟಗಾ ಗ್ರಾಮದಲ್ಲಿ ನಡೆದಿದೆ. ಕಲಬುರಗಿಯ ಇಟಗಾ ಗ್ರಾಮದ ಭೀಮಾಶಂಕರ್ ಹಲ್ಲೆಗೊಳಗಾದ ಯುವಕ.

ನಿನ್ನೆ ರಾತ್ರಿ ಸ್ನೇಹಿತನ ಮದುವೆ ಮೆರವಣಿಗೆಯಲ್ಲಿ ಡಿಜೆ ಮೂಲಕ ಅಗರ್ ಛುವಾ ತೋ ಮಂದಿರಕೋ ತೇರಿ ಔಖಾತ್ ದಿಖಾ ದೇಂಗೆ ಎಂಬ ಸಾಂಗ್ ಹಾಕಿ ಯುವಕರು ಡ್ಯಾನ್ಸ್ ಮಾಡಿದ್ದರು. ಈ ವೇಳೆ ಅನ್ಯ ಕೋಮಿನ ಐದಾರು ಜನ ಯುವಕರು ಸಾಂಗ್​ ಯಾಕೆ ಹಾಕಿದ್ದೀರಿ ಅಂತಾ ಪ್ರಶ್ನಿಸಿ ಭೀಮಾಶಂಕರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಇನ್ನು ಭೀಮಾಶಂಕರ್ ಮೇಲೆ ಹಲ್ಲೆ ಮಾಡಿರೋದ್ರಿಂದ ನಮ್ಮ ಕುಟುಂಬಕ್ಕೆ ಜೀವ ಭಯವಿದೆ ಅಂತಾ ಭೀಮಾಶಂಕರ್ ತಾಯಿ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಘಟನೆಯ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಹಂಪಿ ವಿರೂಪಾಕ್ಷ ಸನ್ನಿಧಿಯಲ್ಲಿ ಸೆಟ್ಟೇರಿತು ರಾಮ್ ಚರಣ್ ನಿರ್ಮಾಣದ ‘ದಿ ಇಂಡಿಯನ್ ಹೌಸ್’ ಸಿನಿಮಾ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here