Download Our App

Follow us

Home » ರಾಜಕೀಯ » ಸಿಎಂ, ಡಿಸಿಎಂ ಹುದ್ದೆ ಬಗ್ಗೆ ಚರ್ಚೆ ಮಾಡಿದ್ರೆ ನೋಟಿಸ್ ಕೊಡ್ಬೇಕಾಗುತ್ತೆ : ಸ್ವಪಕ್ಷ ಶಾಸಕರಿಗೆ ಡಿಕೆಶಿ ಖಡಕ್ ವಾರ್ನಿಂಗ್..!​

ಸಿಎಂ, ಡಿಸಿಎಂ ಹುದ್ದೆ ಬಗ್ಗೆ ಚರ್ಚೆ ಮಾಡಿದ್ರೆ ನೋಟಿಸ್ ಕೊಡ್ಬೇಕಾಗುತ್ತೆ : ಸ್ವಪಕ್ಷ ಶಾಸಕರಿಗೆ ಡಿಕೆಶಿ ಖಡಕ್ ವಾರ್ನಿಂಗ್..!​

ಬೆಂಗಳೂರು : ಸಿಎಂ ಬದಲಾವಣೆ, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರವಾಗಿ ಕಾಂಗ್ರೆಸ್ ನಾಯಕರು, ಸಚಿವರು, ಶಾಸಕರು ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಕ್ರಮಕ್ಕೆ ಮುಂದಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸಿಎಂ, ಡಿಸಿಎಂ ವಿಚಾರವಾಗಿ ಬಹಿರಂಗ ಚರ್ಚೆ ಬೇಡ. ಪಕ್ಷ ಕಟ್ಟಲು, ಅಧಿಕಾರಕ್ಕೆ ತರಲು ಬಹಳ ಕಷ್ಟಪಟ್ಟಿದ್ದೇವೆ. ನಿಮ್ಮ ಬಾಯಿಗೆ ಬೀಗ ಹಾಕಿ, ಯಾರೂ ಬಾಯಿಗೆ ಬಂದಂತೆ ಮಾತನಾಡಬೇಡಿ. ಹೀಗೆ ಮಾತ್ನಾಡ್ತಾ ಇದ್ರೆ ನೋಟಿಸ್​ ಕೊಡ್ಬೇಕಾಗುತ್ತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಪಕ್ಷದ ಶಾಸಕರು, ಸಚಿವರಿಗೆ ಖಡಕ್ ವಾರ್ನಿಂಗ್​ ನೀಡಿದ್ದಾರೆ.

ನನಗೆ ಯಾರ ರೆಕಮಂಡೇಶನ್ ಬೇಡ. ಆಶೀರ್ವಾದ ಸಾಕು. ರಾಜಕಾರಣದ ಸುದ್ದಿಗೆ ನೀವು ಬರಲು ಹೋಗಬೇಡಿ ಎಂದು ಸ್ವಾಮೀಜಿಗಳಿಗೆ ಡಿಸಿಎಂ ಮನವಿ ಮಾಡಿಕೊಂಡಿದ್ದಾರೆ. ಎಲ್ಲಾ ಸ್ವಾಮೀಜಿಗಳಿಗೂ ಕೈ ಮುಗಿಯುವೆ. ಚಂದ್ರಶೇಖರ್ ಸ್ವಾಮೀಜಿ ನನ್ನ ಮೇಲಿನ ಅಭಿಮಾನದಿಂದ ಮಾತನಾಡಿದ್ದಾರೆ ಅಷ್ಟೇ. ರಾಜಕಾರಣದ ಸುದ್ದಿಗೆ ನೀವು ಬರಬೇಡಿ ಎಂದಿದ್ದಾರೆ.

ನಿನ್ನೆ ನಾವೆಲ್ಲ ಎಂಪಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇವೆ. ಮುಕ್ತವಾಗಿ ಮಾತಾಡಿದ್ದೇವೆ. ರಾಜ್ಯದಲ್ಲಿ ಯಾವ ಡಿಸಿಎಂ ಚರ್ಚೆಯೂ ಇಲ್ಲ, ಸಿಎಂ ಪ್ರಶ್ನೆಯೂ ಇಲ್ಲ. ನಾನು ಖರ್ಗೆ ಹಾಗೂ ಸಿದ್ದರಾಮಯ್ಯ ಕೂತು ಪಕ್ಷದ ಹಿತದೃಷ್ಟಿಯಿಂದ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಯಾವ ಎಂಎಲ್ಎ ಕೂಡ ಮಾತಾಡುವ ಅವಶ್ಯಕತೆ ಇಲ್ಲ. ಎಐಸಿಸಿಯವರು, ನಾನೂ ವಿಧಿಯಿಲ್ಲದೇ, ಪಕ್ಷದ ಶಿಸ್ತು ಕಾಪಾಡಲು ನೋಟಿಸ್ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಕಳ್ಳತನ ಕೇಸ್​ನಲ್ಲಿ ಅಟ್ಟಿಕಾ ಬಾಬು ಮತ್ತೆ ಅರೆಸ್ಟ್​ – ತುರುವೇಕೆರೆ ಕೇಸ್​ನಲ್ಲಿ ರಿಲೀಸ್, ದೊಡ್ಡಬಳ್ಳಾಪುರ ಕೇಸ್​ನಲ್ಲಿ ಅಂದರ್​​..!

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here