ಬೆಂಗಳೂರು : ವಿದ್ಯಾರ್ಥಿಗಳಿಗೆ ಬುದ್ಧಿ ಹೇಳಿ ಪಾಠ ಮಾಡಬೇಕಾದ ಉಪನ್ಯಾಸಕರೇ ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ನಡೆದಿದೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಐವರು ಅತಿಥಿ ಉಪನ್ಯಾಸಕರ ವಿರುದ್ದ FIR ದಾಖಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಐವರು ಅತಿಥಿ ಉಪನ್ಯಾಸಕರು ಅತಿಥಿ ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಅತಿಥಿ ಉಪನ್ಯಾಸಕರಾದ ಸ್ವರೂಪ್ ಕುಮಾರ್, ರಾಮಾಂಜನೇಯ, ರಂಗಸ್ವಾಮಿ, ಜಗನ್ನಾಥ ಹಾಗೂ ಶಿವರಾಜ್ ಸಿಂದಗಿ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ.

ಅತಿಥಿ ಉಪನ್ಯಾಸಕರ ವಿರುದ್ದ ಪ್ರಕರಣ ದಾಖಲಾದ ಬೆನ್ನಲ್ಲೇ ಹಲವು ವೀಡಿಯೋಗಳು ವೈರಲ್ ಆಗಿದೆ. ಮಕ್ಕಳಿಗೆ ಪಾಠ ಮಾಡೋ ಉಪನ್ಯಾಸಕರು ಶರ್ಟ್ ಬಿಚ್ಚಿ ಕುಡಿದು ಡ್ಯಾನ್ಸ್ ಮಾಡುತ್ತ ಕಾರಿನಲ್ಲಿ ಯುನಿವರ್ಸಿಟಿ ಆವರಣದಲ್ಲಿಯೇ ಹಲವಾರು ಹುಚ್ಚಾಟ ಮಾಡಿರೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬೆಂಗಳೂರು ವಿಶ್ವವಿದ್ಯಾಲಯದ ರಾಮನಗರ PG ಸೆಂಟರ್ನಲ್ಲಿ ಸೋಶಿಯಾಲಜಿ ವಿಭಾಗದ ಅತಿಥಿ ಉಪನ್ಯಾಸಕನಾಗಿರೋ ರಾಮಾಂಜನೇಯ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳೂ ಕೇಳಿಬಂದಿದೆ. ಅತಿಥಿ ಉಪನ್ಯಾಸಕ ರಾಮಾಂಜನೇ ಕಣ್ಣು ಕಾಣದ ವಿದ್ಯಾರ್ಥಿಗೆ ಇಂಟರ್ನಲ್ ಮಾರ್ಕ್ಸ್ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.

ಇಷ್ಟಕ್ಕೆ ನಿಲ್ಲದ ಅತಿಥಿ ಉಪನ್ಯಾಸಕ ರಾಮಾಂಜನೇಯನ ಮತ್ತೊಂದು ಕರಾಳ ಮುಖ ಬಯಲಾಗಿದ್ದು, ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ವಿದ್ಯಾರ್ಥಿನಿಯನ್ನು ಎತ್ತಿಕೊಂಡು ಡ್ಯಾನ್ಸ್ ಮಾಡಿದ್ದಾನೆ. ಸದ್ಯ ಈ ಎಲ್ಲಾ ವಿಡಿಯೋಗಳು ವೈರಲ್ ಆಗಿದ್ದು, ಇದನ್ನು ನೋಡಿದ ಸಾರ್ವಜನಿಕರು ಇದೀಗ ಭಾರೀ ಆಕ್ರೋಶ ಹೊರಹಾಕುತ್ತಿದ್ದಾರೆ.




ಇದನ್ನೂ ಓದಿ : “ಮಹಾನ್” ಚಿತ್ರದ ಪ್ರಮುಖ ಪಾತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ವರ್ಷ ಬೊಳ್ಳಮ್ಮ!







