ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಮನೆಗಳಿಗೆ ನೀರು ನುಗ್ಗಿದೆ.
ಇನ್ನು ಸೋಮೇಶ್ವರದ ಉಚ್ಚಿಲ ಬಟ್ಟಪ್ಪಾಡಿ ಎಂಬ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಅಪಾಯಕ್ಕೀಡಾದ ಮನೆಯಲ್ಲಿದ್ದ ಕುಟುಂಬವನ್ನು ಸ್ಥಳಾಂತರಿಸಿದ ಬೆನ್ನಲ್ಲೇ ಆ ಮನೆಯನ್ನು ಕಡಲಿನ ರಕ್ಕಸ ಅಲೆಗಳು ನುಂಗಿ ಹಾಕಿವೆ. ಅಲೆಗಳ ಆರ್ಭಟಕ್ಕೆ ಮನೆ ಕುಸಿದು ಬೀಳುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಮತ್ತೆ ಅಪಾಯ ಎದುರಿಸುತ್ತಿರುವ ಮೂರು ಮನೆಗಳ ಕುಟುಂಬ ಸದಸ್ಯರನ್ನ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.
ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿಗಳಾದ ಮತ್ತಡಿ, ತಹಶೀಲ್ದಾರ್ ಪ್ರದೀಪ್ ಕೊರ್ಡೆಕರ್ ಸಹಿತ ಹಲವು ಅಧಿಕಾರಿಗಳು ಬಟ್ಟಪ್ಪಾಡಿಗೆ ತೆರಳಿ ಅಪಾಯದಲ್ಲಿರುವ ಮನೆಗಳ ಕುಟುಂಬವರನ್ನು ತೆರವುಗೊಳಿಸಿದ್ದಾರೆ.
ಇದನ್ನೂ ಓದಿ : ಚಿಕ್ಕ ಮಗುವಿನಿಂದಲೂ ಅಮೂಲ್ಯಳನ್ನು ಎತ್ತಿ ಆಡಿಸಿದ್ದೇನೆ, ಆಕೆಯ ಜೊತೆ ರೊಮ್ಯಾಂಟಿಕ್ ಸೀನ್ ಸಾಧ್ಯವಿಲ್ಲ : ನಟ ದರ್ಶನ್..!