ಬೆಂಗಳೂರು : ಈ ಬಾರಿ ನಗರದಲ್ಲಿ 1230 ಡೆಂಘೀ ಕೇಸ್ ಪತ್ತೆಯಾಗಿದ್ದರಿಂದ ತೀವ್ರ ಆತಂಕ ಸೃಸ್ಟಿಯಾಗಿದೆ. BBMP ವ್ಯಾಪ್ತಿಯಲ್ಲೇ ಅತೀ ಹೆಚ್ಚು ಡೆಂಘೀ ಕೇಸ್ ಬೆಳಕಿಗೆ ಬಂದಿದ್ದು, ಪಾಲಿಕೆ ಡೆಂಘೀ ನಿಯಂತ್ರಣಕ್ಕೆ ಹರಸಾಹಸ ಪಡುವಂತಾಗಿದೆ. ಈ ಹಿನ್ನೆಲೆ ನಗರದಲ್ಲಿ ಡೆಂಘೀ ಹರಡುವಿಕೆಯನ್ನು ತಡೆಯುವ ಸಲುವಾಗಿ ಮನೆ-ಮನೆ ಸಮೀಕ್ಷೆ ನಡೆಸಿ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣ ನಿಯಂತ್ರಿಸುವ ಸಂಬಂಧ ಬುಧವಾರ ಪಾಲಿಕೆ ಕೇಂದ್ರ ಕಚೇರಿ ಸಭಾಂಗಣ- 1ರಲ್ಲಿ ನಡೆದ ಸಭೆಯ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಆಯಾ ವಲಯ ವ್ಯಾಪ್ತಿಯಲ್ಲಿ ಆರೋಗ್ಯ ಪರಿವೀಕ್ಷರು, ಆಶಾ ಕಾರ್ಯಕರ್ತೆಯರು, ಎಎನ್ಎಂಗಳು ಹಾಗೂ ಲಿಂಕ್ ವರ್ಕರ್ಸ್ಗಳು ಸೇರಿದಂತೆ 1000 ಮನೆಗಳಿಗೊಂದು ಬ್ಲಾಕ್ ಅನ್ನು ರಚಿಸಿಕೊಂಡು ಡೆಂಘೀ ನಿಯಂತ್ರಿಸಲು ಕ್ರಮ ಕೈಗೊಳುತ್ತೇವೆ.
ನಾಗರಿಕರಲ್ಲಿ ಅರಿವು ಮೂಡಿಸುವುದು ಹಾಗೂ ಯಾರಿಗಾದರು ಜ್ವರ ಬಂದಿದ್ದಲ್ಲಿ ಅಂತಹವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರೀಕ್ಷೆ ಮಾಡಿಸಕೊಳ್ಳಲು ತಿಳಿಸುವುದು ಸೇರಿದಂತೆ ಸಮಗ್ರವಾಗಿ ಮನೆ-ಮನೆ ಸಮೀಕ್ಷೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
- ಡೆಂಘೀ ಪ್ರಕರಣಗಳ ವಿವರ(2024 ಜನವರಿಯಿಂದ ಇದುವರೆಗೆ)
ವಲಯ – ಪ್ರಕರಣ
ಬೊಮ್ಮನಹಳ್ಳಿ: 122
ಪೂರ್ವ: 218
ಮಹದೇವಪುರ: 386
ಆರ್.ಆರ್.ನಗರ: 75
ದಕ್ಷಿಣ: 190
ಪಶ್ಚಿಮ: 141
ಯಲಹಂಕ: 90
ದಾಸರಹಳ್ಳಿ: 08
ಒಟ್ಟು: 1230 ಪ್ರಕರಣ
ಇದನ್ನೂ ಓದಿ : ಚನ್ನಪಟ್ಟಣ ಗೆಲ್ಲಲು ಡಿಸಿಎಂ ಡಿಕೆಶಿ ದೊಡ್ಡ ಗೇಮ್ಪ್ಲಾನ್ - ಅಚ್ಚರಿ ಅಭ್ಯರ್ಥಿಯಾಗಿ ಪುತ್ರಿ ಐಶ್ವರ್ಯಾ ಸ್ಪರ್ಧೆ?