Download Our App

Follow us

Home » Uncategorized » ಸೂರಜ್ ರೇವಣ್ಣಗೆ ಮತ್ತೊಂದು ಸಂಕಷ್ಟ – ಸಲಿಂಗಕಾಮ ಲೈಂಗಿಕ ದೌರ್ಜನ್ಯ ಆರೋಪದಲ್ಲಿ 2ನೇ ಕೇಸ್​ ದಾಖಲು..!

ಸೂರಜ್ ರೇವಣ್ಣಗೆ ಮತ್ತೊಂದು ಸಂಕಷ್ಟ – ಸಲಿಂಗಕಾಮ ಲೈಂಗಿಕ ದೌರ್ಜನ್ಯ ಆರೋಪದಲ್ಲಿ 2ನೇ ಕೇಸ್​ ದಾಖಲು..!

ಹಾಸನ : ಸಿಐಡಿ ವಶದಲ್ಲಿರುವ ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಮತ್ತೊಂದು ಎಫ್​ಐಆರ್ ದಾಖಲಾಗಿದೆ. ಹೊಳೆನರಸೀಪುರ ತಾಲೂಕಿನ ಯುವಕನೊಬ್ಬ ಮೂರು ವರ್ಷಗಳ ಹಿಂದೆ ತನ್ನ ಮೇಲೆ ಸೂರಜ್​ ರೇವಣ್ಣ ಸಲಿಂಗಕಾಮ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರು ನೀಡಿದ್ದು, ಈ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ಸೂರಜ್ ವಿರುದ್ಧ ಐಪಿಸಿ ಸೆಕ್ಷೆನ್ 377,342,506 ಅಡಿ ಎಫ್​ಐಆರ್ ದಾಖಲಾಗಿದೆ.

ಅಚ್ಚರಿ ಅಂದರೆ, ಈ ಹಿಂದೆ ಮೊದಲ ಕೇಸ್​ನ ಸಂತ್ರಸ್ತನ ವಿರುದ್ಧವೇ ದೂರು ನೀಡಿದ್ದವ ಇದೀಗ ಸೂರಜ್​ ವಿರುದ್ಧ ಸಲಿಂಗಕಾಮ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ. ಮೂರು ವರ್ಷಗಳ ಹಿಂದೆ ತನ್ನ ಮೇಲೆ ಸಲಿಂಗಕಾಮ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿ ಸೂರಜ್ ರೇವಣ್ಣ ಆಪ್ತನಾಗಿದ್ದ ಹೊಳೆನರಸೀಪುರ ತಾಲ್ಲೂಕು ಮೂಲದ ಯುವಕ ದೂರು ನೀಡಿದ್ದಾನೆ. ಈ ಮೂಲಕ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ಸೂರಜ್ ವಿರುದ್ಧ ಎರಡನೇ ಕೇಸ್ ದಾಖಲಾದಂತಾಗಿದೆ.

ಇದೇ ಎರಡನೇ ಕೇಸ್​ನ ಸಂತ್ರಸ್ತ ಜೂನ್ 21 ರಂದು ಸೂರಜ್ ಅವರನ್ನ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ಮೊದಲ ಪ್ರಕರಣದ ಸಂತ್ರಸ್ತನ ವಿರುದ್ಧ ದೂರು ನೀಡಿದ್ದ. ಆದ್ರೆ, ಇದೀಗ ಆಪ್ತ ಉಲ್ಟಾ ಹೊಡೆದು ಸೂರಜ್ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಅರಕಲಗೂಡು ಮೂಲದ ಯುವಕನ(ಮೊದಲ ಪ್ರಕರಣದ ಸಂತ್ರಸ್ತ) ವಿರುದ್ಧ ದೂರು ನೀಡಲು ಸೂರಜ್ ಒತ್ತಡ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ಸೂರಜ್​ ಮತ್ತೊಂದು ಕಂಟಕ ಎದುರಾಗಿದೆ. ಮೊದಲ ಪ್ರಕರಣ ಸಂಬಂಧ ಇಂದು ಹಾಸನಕ್ಕೆ ಸೂರಜ್ ರೇವಣ್ಣನ್ನು​​ ಕೊಂಡೊಯ್ದು ಮಹಜರ್​​ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ : ಲೋಕಸಭೆ ವಿಪಕ್ಷ ನಾಯಕನಾಗಿ ರಾಹುಲ್​ ಗಾಂಧಿ ಆಯ್ಕೆ..!

 

Leave a Comment

DG Ad

RELATED LATEST NEWS

Top Headlines

ಬಿಎಂಟಿಸಿ ಬಸ್‌ನಲ್ಲಿ ಕುಳಿತ್ತಿದ್ದ ಕಂಡಕ್ಟರ್‌ ತಲೆಗೆ ಕಲ್ಲಿಂದ ಹೊಡೆದ ಪ್ರಯಾಣಿಕ..!

ಬೆಂಗಳೂರು : ಬಿಎಂಟಿಸಿ ಕಂಡಕ್ಟರ್, ಡ್ರೈವರ್​​ಗಳ ಮೇಲೆ ಪದೇ-ಪದೇ ಹಲ್ಲೆ ಆಗ್ತಲೇ ಇವೆ. ಕಳೆದ ತಿಂಗಳು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಬಿಎಂಟಿಸಿ ವೋಲ್ವೋ ಬಸ್ ಪ್ರಯಾಣಿಕನೊಬ್ಬ ಕಂಡಕ್ಟರ್​​ಗೆ ಚಾಕುವಿನಿಂದ

Live Cricket

Add Your Heading Text Here