ಬೆಂಗಳೂರು : ನನಗೆ ಮಗನನ್ನು ಕೊಲ್ಲುವ ಉದ್ದೇಶ ಇರಲಿಲ್ಲ. ಪ್ರಜ್ಞೆ ತಪ್ಪಿಸಬೇಕೆಂದು ಪ್ರಯತ್ನ ಮಾಡಿದ್ದೆ. ದಿಂಬನ್ನು ಒತ್ತಿ ಉಸಿರುಗಟ್ಟಿಸಲು ಯತ್ನ ನಡೆಸಿದ್ದೆ, ಮಗು ಪ್ರಜ್ಞೆ ತಪ್ಪಿದೆ ಎಂದು ತಿಳಿದುಕೊಂಡಿದ್ದೆ, ಆದರೆ ಮಗು ಸಾವನ್ನಪ್ಪಿತ್ತು ಎಂದು ಗೋವಾ ಪೊಲೀಸರ ಮುಂದೆ ಬೆಂಗಳೂರಿನ ಸ್ಟಾರ್ಟ್ ಅಪ್ CEO ಸುಚನಾ ಸೇಠ್ ತಪ್ಪೊಪ್ಪಿಕೊಂಡಿದ್ದಾರೆ.
ಗೋವಾ ಪೊಲೀಸರು ಸುಚೇನಾ ಸೇಠ್ ಸ್ಟೇಟ್ಮೆಂಟ್ ಪಡೆದಿದ್ದು, ನನಗೆ ಮಗನನ್ನು ಕೊಲ್ಲುವ ಉದ್ದೇಶ ಇರಲಿಲ್ಲ, ಪ್ರಜ್ಞೆ ತಪ್ಪಿಸಬೇಕು ಎಂದು ಪ್ರಯತ್ನ ಮಾಡಿದ್ದೆ. ದಿಂಬನ್ನು ಒತ್ತಿ ಉಸಿರುಗಟ್ಟಿಸಲು ಯತ್ನ ನಡೆಸಿದ್ದೆ, ಮಗು ಪ್ರಜ್ಞೆ ತಪ್ಪಿದೆ ಎಂದು ತಿಳಿದುಕೊಂಡಿದ್ದೆ, ಆದರೆ ಮಗು ಸಾವನ್ನಪ್ಪಿತ್ತು. ತಕ್ಷಣ ಏನ್ ಮಾಡ್ಬೇಕು ಗೊತ್ತಾಗಲಿಲ್ಲ, ಇದೇ ನೋವಿನಲ್ಲಿ ಕೈಕೊಯ್ದುಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದೆ. ಗಾಬರಿಯಲ್ಲಿ ಏನೂ ತೋಚದೆ ಸೂಟ್ ಕೇಸ್ನಲ್ಲಿ ತುಂಬಿದೆ. ಮಗುವಿನ ಬಾಡಿ ಹಾಕಿ ಪರಾರಿಯಾಗಲು ಯತ್ನಿಸಿದೆ ಎಂದಿದ್ದಾರೆ.
ನನ್ನ ಪತಿ ಜತೆಗಿನ ವಿಚ್ಚೇದನ ಅರ್ಜಿ ಕೋರ್ಟ್ನಲ್ಲಿತ್ತು, ವಾರಕ್ಕೊಮ್ಮೆ ಪತಿ ವೆಂಕಟರಮಣಗೆ ಮಗು ತೋರಿಸಬೇಕಿತ್ತು. ವಿಡಿಯೋ ಕಾಲ್ ಮೂಲಕ ಮಗುವನ್ನು ತೋರಿಸಬೇಕಿತ್ತು, ಗಂಡನಿಗೆ ಮಗು ತೋರಿಸಲು ನನಗೆ ಇಷ್ಟ ಇರಲಿಲ್ಲ. ನನ್ನ ಮಗು ಕಂಡ್ರೆ ನನಗೂ ಪ್ರೀತಿ ಎಂದು ಹೇಳಿದ್ದಾರೆ.
ಗೋವಾ ಪೊಲೀಸರು ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಕಚೇರಿಯಲ್ಲೂ ಮಾಹಿತಿ ಸಂಗ್ರಹಿಸಿದ್ದಾರೆ. ಗೋವಾ ಪೊಲೀಸರು ಇಂದು ಸ್ಥಳ ಮಹಜರ್ ಮಾಡಲಿದ್ಧಾರೆ.
ಇದನ್ನೂ ಓದಿ : ಸಂಗೀತ ನಿರ್ದೇಶಕ ಗುರುಕಿರಣ್ ಅತ್ತೆಮನೆಯಲ್ಲಿ ಕಳ್ಳತನ.