Download Our App

Follow us

Home » ರಾಜಕೀಯ » ಮಾಡಿದ್ದ ಶಪಥದಂತೆ ಸಿಎಂ ಆಗಿ ವಿಧಾನಸಭೆಗೆ ಎಂಟ್ರಿ..!

ಮಾಡಿದ್ದ ಶಪಥದಂತೆ ಸಿಎಂ ಆಗಿ ವಿಧಾನಸಭೆಗೆ ಎಂಟ್ರಿ..!

ಅಮರಾವತಿ : ವಿಧಾನಸಭೆ ಅಧಿವೇಶನದಲ್ಲಿ ಅವಮಾನಗೊಂಡು ಹೊರಬಂದಿದ್ದ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮಾಡಿದ್ದ ಶಪಥದಂತೆ 31 ತಿಂಗಳ ನಂತರ  ಮುಖ್ಯಮಂತ್ರಿಯಾಗಿಯೇ ಆಂಧ್ರ ಪ್ರದೇಶದ ವಿಧಾನಸಭೆಗೆ ಪ್ರವೇಶ ಮಾಡಿದ್ದಾರೆ.

2019ರ ವಿಧಾನಸಭೆ ಚುನಾವಣೆಯಲ್ಲಿ ಆಂಧ್ರ ಪ್ರದೇಶದಲ್ಲಿ ಟಿಡಿಪಿ ಅಧಿಕಾರ ಕಳೆದುಕೊಂಡಿತು. 175 ಸ್ಥಾನಗಳಲ್ಲಿ ಕೇವಲ 23 ಸೀಟುಗಳಿಸಿತು. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿ ಸರ್ಕಾರ ರಚನೆ ಮಾಡಿತು. ಬಳಿಕ ವಿಧಾನಸಭೆ ಅಧಿವೇಶನದಲ್ಲಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಅವಮಾನಿಸಲಾಯಿತ್ತು.

ಆಗ ಎನ್. ಚಂದ್ರಬಾಬು ನಾಯ್ಡು ಅವರು ಮುಂದೆ ನಾನು ಈ ಸಭೆಗೆ ಹಾಜರಾಗುವುದಿಲ್ಲ. ಮುಖ್ಯಮಂತ್ರಿಯಾಗಿಯೇ  ಸದನಕ್ಕೆ ಮರಳುತ್ತೇನೆ ಎಂದು ಶಪಥವನ್ನು ಮಾಡಿದ್ದರು. ಇದೀಗ  2024ರ ಚುನಾವಣೆಯಲ್ಲಿ ಆಂಧ್ರ ಪ್ರದೇಶದ 25 ಲೋಕಸಭಾ ಕ್ಷೇತ್ರಗಳ ಪೈಕಿ ಟಿಡಿಪಿ 16 ಕ್ಷೇತ್ರಗಳಲ್ಲಿ ಜಯಗಳಿಸಿದೆ. 175 ಸದಸ್ಯ ಬಲದ ವಿಧಾನಸಭೆಯಲ್ಲಿ 135 ಸ್ಥಾನಗಳಲ್ಲಿ ಪಕ್ಷ ವಿಜಯಸಾಧಿಸಿದೆ. ಈ ಮೂಲಕ ಪಕ್ಷ ಪ್ರಚಂಡ ಬಹುಮತ ಪಡೆದಿದ್ದು, 31 ತಿಂಗಳ ನಂತರ ಎನ್. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿಯೇ ವಿಧಾನಸಭೆ ಪ್ರವೇಶ ಮಾಡುತ್ತಿದ್ದಾರೆ.

ಟಿಡಿಪಿ ಪಕ್ಷದ ಪ್ರಚಂಡ ಜಯದ ಜೊತೆಗೆ ಎನ್. ಚಂದ್ರಬಾಬು ನಾಯ್ಡು ಮತ್ತೆ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾದ ಟಿಡಿಪಿಗೆ ಕೇಂದ್ರದಲ್ಲಿಯೂ ಮಹತ್ವದ ಸ್ಥಾನಗಳು ದೊರೆತಿದೆ. ಈ ಮೂಲಕ ಎನ್. ಚಂದ್ರಬಾಬು ನಾಯ್ಡು 2019ರ ಸೋಲು, ಅವಮಾನದಿಂದ ಹೊರ ಬಂದಿದ್ದಾರೆ.

ಇದನ್ನೂ ಓದಿ : ಪೊಲೀಸ್​​ ಕಸ್ಟಡಿಯಲ್ಲಿರೋ ದರ್ಶನ್​​​​ ಬಿಪಿ ಫುಲ್​ ಹೈ – ಮೆಡಿಕಲ್​ ಎಕ್ಸಾಮಿನೇಷನ್ ವರದಿಯಲ್ಲೇನಿದೆ?

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here