ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾಗೌಡ ಹಾಗೂ ಇನ್ನು ಕೆಲ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಜೈಲಿನಲ್ಲಿ ಒಂದು ದಿನ ಕಳೆದಿರುವ ಪವಿತ್ರಾಗೌಡಗೆ ಕಾರಾಗೃಹದ ಅಧಿಕಾರಿಗಳು ಇಂದು ವಿಚಾರಣಾಧೀನ ಕೈದಿ ನಂಬರ್ 6024 ನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಎ1 ಆರೋಪಿ ಪವಿತ್ರಾ ಗೌಡ ಜೈಲಿನಲ್ಲಿ ಸರಿಯಾಗಿ ಊಟ ಮಾಡದೇ, ರಾತ್ರಿಯಲ್ಲಿ ನಿದ್ರೆ ಕೂಡ ಮಾಡದೇ ಚಡಪಡಿಸಿದ್ದಾರೆ. ಐಷಾರಾಮಿ ಜೀವನ ಲೀಡ್ ಮಾಡಿದ್ದ ಪವಿತ್ರಾಗೌಡ ಈಗ ಜೈಲು ವಾಸದಲ್ಲಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಎದ್ದಿರುವ ಅವರು ಜೈಲಿನಲ್ಲಿ ವಾಕಿಂಗ್ ಮಾಡಿದ್ದಾರೆ. ತನ್ನ ಕೊಠಡಿಯಲ್ಲಿ ದಿನಚರಿ ಮುಗಿಸಿರುವ ಪವಿತ್ರಾ, ಮೌನಕ್ಕೆ ಶರಣಾಗಿದ್ದಾರೆ.
ಜೈಲ್ ಮೆನು ಪ್ರಕಾರ ಮುಂಜಾನೆ ಉಪ್ಪಿಟ್ಟು ಸೇವಿಸಿ ಕಾಲ ಹರಣ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಮುಖ್ಯ ಜೈಲಿನ ಮಹಿಳಾ ಬ್ಯಾರಾಕ್ನಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಇರುವ ಪವಿತ್ರಾ ಫುಲ್ ಸೈಲೆಂಟ್ ಆಗಿದ್ದಾರೆ. ಅತ್ತ ಕ್ವಾರಂಟೈನ್ ಸೆಲ್ನಲ್ಲಿ ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನು ಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್ ಮತ್ತು ಕೇಶವ್ ಸೇರಿ 9 ಜನ ಕೊಲೆ ಆರೋಪಿಗಳನ್ನು ಒಂದೇ ಕಡೆ ಇರಿಸಲಾಗಿದೆ. ಇನ್ನು ಈ ಕೊಲೆ ಕೇಸ್ನ ಪ್ರಮುಖ ಆರೋಪಿ ಪವಿತ್ರಾಗೌಡಗೆ ಇಂದು ಜೈಲಿನ ಆಸ್ಪತ್ರೆಯ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಲಿದೆ.
ಇದನ್ನೂ ಓದಿ : “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” – ಶ್ರೀನಗರದಿಂದ ಯೋಗ ಸಂದೇಶ ಸಾರಿದ ಪ್ರಧಾನಿ ಮೋದಿ..!