Download Our App

Follow us

Home » ಮೆಟ್ರೋ » ರಾಜ್ಯ ಕಾಂಗ್ರೆಸ್ ಆಡಳಿತದಲ್ಲಿ ಮಹಾ ಫಿಕ್ಸಿಂಗ್ ಆರೋಪ? PWD ಇಲಾಖೆಯಲ್ಲಿ 4,400 ಕೋಟಿ ಭಾರೀ ಹಗರಣ?

ರಾಜ್ಯ ಕಾಂಗ್ರೆಸ್ ಆಡಳಿತದಲ್ಲಿ ಮಹಾ ಫಿಕ್ಸಿಂಗ್ ಆರೋಪ? PWD ಇಲಾಖೆಯಲ್ಲಿ 4,400 ಕೋಟಿ ಭಾರೀ ಹಗರಣ?

ಬೆಂಗಳೂರು : ರಾಜ್ಯ ಕಾಂಗ್ರೆಸ್ ಆಡಳಿತದಲ್ಲಿ ಮಹಾ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. PWD ಇಲಾಖೆಯಲ್ಲಿ ನಡೀತಾ 4,400 ಕೋಟಿ ಭಾರೀ ಹಗರಣ? 4,400 ಕೋಟಿ ರೂ. ಮೊತ್ತದ ಟೆಂಡರ್ ರಾತ್ರೋರಾತ್ರಿ ಓಪನ್ ಆಗಿದೆ. ಮಿಡ್​​ನೈಟ್ ಪ್ರಾಜೆಕ್ಟ್​ನಲ್ಲಿ 2 ಅಧಿಕಾರಿಗಳು ಕಿಕ್​ಬ್ಯಾಕ್ ಪಡೆದಿರೋ ಶಂಕೆ ವ್ಯಕ್ತವಾಗಿದೆ. ರಾತ್ರೋರಾತ್ರಿ ಟೆಂಡರ್ ಓಪನ್ ಮಾಡಿದ ಆ ಅಧಿಕಾರಿಗಳು ಯಾರು?
ಟೆಂಡರ್ ಫಿಕ್ಸಿಂಗ್ ಮಾಡಿಕೊಂಡ ಆ ಸ್ಟಾರ್ ಗುತ್ತಿಗೆದಾರರು ಯಾರು? PWDಯ 4,400 ಕೋಟಿ ಹಗರಣದ ಮಹಾಸ್ಟೋರಿಯನ್ನು ಬಿಟಿವಿ ಸ್ಫೋಟಿಸಿದೆ.

2024ರ ಮಾರ್ಚ್​​ನಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಟೆಂಡರ್ ಕರೆದಿತ್ತು. 204 ತಾಲ್ಲೂಕಿನ ಹೆದ್ದಾರಿ ಅಭಿವೃದ್ಧಿ, 314 ಕಾಮಗಾರಿಗಳಿಗೆ ಟೆಂಡರ್ ಅನುಮೋದನೆಯಾಗಿತ್ತು. ಒಟ್ಟು 202 ಪ್ಯಾಕೇಜ್​​ಗಳ ಮೂಲಕ PWD ಟೆಂಡರ್ ಆಹ್ವಾನಿಸಿತ್ತು. ಆದರೆ ವಿಧಾನಸಭಾ ಕ್ಷೇತ್ರವಾರು ಕಾಮಗಾರಿಯಾದ್ರೂ ಕೆಲವರಿಗಷ್ಟೇ ಅವಕಾಶ ನೀಡಿ, ತಮಗೆ ಬೇಕಾದ ಗುತ್ತಿಗೆದಾರರನ್ನು ಸೆಲೆಕ್ಟ್ ಮಾಡಿಕೊಂಡಿರೋ ಆರೋಪ ಕೇಳಿಬಂದಿದೆ.

ಕೆಲವು ಕ್ಷೇತ್ರಗಳಲ್ಲಿ ಅನರ್ಹರಿಗೂ ಟೆಂಡರ್​ನಲ್ಲಿ ಪಾಲ್ಗೊಳ್ಳುವ ಅವಕಾಶವಿತ್ತು, ಶಾಸಕರ ಬಂಧು-ಬಳಗಕ್ಕೆ ಟೆಂಡರ್ ನೀಡಲೂ ಅಧಿಕಾರಿಗಳು ಪ್ಲಾನ್ ಮಾಡಿದ್ದರು. 85 ವಿವಿಧ ಕಾಮಗಾರಿಗಳ ಟೆಂಡರ್​ ಅನ್ನು ಇಬ್ಬರಿಗೆ ಮಾತ್ರ ಕೊಟ್ಟಿದ್ದಾರಂತೆ. ಅಧಿಕಾರಿಗಳು ರಾತ್ರೋರಾತ್ರಿ ಟೆಂಡರ್ ಓಪನ್ ಮಾಡಿ ಎಲ್ಲಾ ಮುಗಿಸಿದ್ದು, ತಾಂತ್ರಿಕ, ಹಣಕಾಸು ಬಿಡ್ ಎಲ್ಲಾ ಮುಗಿಸಿ ವರ್ಕ್​ ಆರ್ಡರ್ ಕೊಡಲು ತಯಾರಿ ನಡೆಸಿದ್ದಾರೆ. ಕೇಂದ್ರದ SC/ST ನಿಯಮವನ್ನೂ ಉಲ್ಲಂಘಿಸಿ ಟೆಂಡರ್ ನೀಡ್ತಿರೋ ಆರೋಪ ಕೂಡ ಕೇಳಿಬಂದಿದೆ. ಇದೀಗ ಲೋಕೋಪಯೋಗಿ ಇಲಾಖೆ ವಿರುದ್ಧ ಕಾಂಟ್ರಾಕ್ಟರ್​ಗಳು ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಟಿವಿ ಬಳಿ ಟೆಂಡರ್​ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗಿದೆ.

ಇದನ್ನೂ ಓದಿ : ಶಿವಮೊಗ್ಗದಲ್ಲಿ ಪ್ರತಿಭಟನೆ ವೇಳೆ ಕುಸಿದುಬಿದ್ದು ಮಾಜಿ MLC ಭಾನುಪ್ರಕಾಶ್ ಸಾ*ವು..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here